ಹಬ್ಬದ ಸಂದರ್ಭದಲ್ಲಿ ಎಲ್ಲ ಕಂಪನಿಗಳು ಅಗ್ಗದ ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆ ಮಾಡ್ತಿವೆ. ಇದ್ರಲ್ಲಿ ನೋಕಿಯಾ ಕೂಡ ಹೊರತಾಗಿಲ್ಲ. ನೋಕಿಯಾ ಎರಡು ಅಗ್ಗದ ಫೀಚರ್ ಫೋನ್ ಬಿಡುಗಡೆ ಮಾಡಿದೆ.
ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಎರಡು ಫೋನ್ ಬಿಡುಗಡೆ ಮಾಡಿದೆ. ನೋಕಿಯಾ, ನೋಕಿಯಾ 215 ಮತ್ತು ನೋಕಿಯಾ 225 ಹೆಸರಿನ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಫೋನ್‌ಗಳು 4 ಜಿ ಫೀಚರ್ ಫೋನ್‌ಗಳಾಗಿವೆ. ಕಂಪನಿಯು ಬಳಕೆದಾರರ ಅನುಕೂಲಕ್ಕಾಗಿ 4ಜಿ ವಾಲೆಟ್, ಎಫ್ ಎಂ ರೇಡಿಯೋ ಮತ್ತು ಇಂಟರ್ನೆಟ್ ಬ್ರೌಸಿಂಗ್ ನೀಡಿದೆ.
ಹೊಸ ಫೀಚರ್ ಫೋನ್ ನೋಕಿಯಾ 215, ಗ್ರಾಹಕರಿಗೆ 2,949 ರೂಪಾಯಿಗಳಿಗೆ ಲಭ್ಯವಿದೆ. ಇದರ ಆನ್‌ಲೈನ್ ಮಾರಾಟ ಅಕ್ಟೋಬರ್ 23 ರಿಂದ ಪ್ರಾರಂಭವಾಗಲಿದೆ. ನವೆಂಬರ್ 4 ರಿಂದ ಈ 4 ಜಿ ಫೀಚರ್ ಫೋನ್, ಆಫ್‌ಲೈನ್‌ನಲ್ಲಿ ಖರೀದಿಸಬಹುದು. ನೋಕಿಯಾ 215 ಫೀಚರ್ ಫೋನ್ ಸಯಾನ್ ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ.
ನೋಕಿಯಾದ ಎರಡನೇ ಫೀಚರ್ ಫೋನ್ ನೋಕಿಯಾ 225 ಸಹ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಈ ಪೋನ್ 3,499 ರೂಪಾಯಿಗೆ ಗ್ರಾಹಕರಿಗೆ ಸಿಗಲಿದೆ. ಈ ಫೋನ್ ಕ್ಲಾಸಿಕ್ ಬ್ಲೂ, ಮ್ಯಾಟ್ಲಿ ಸ್ಯಾಂಡ್ ಮತ್ತು ಕಪ್ಪು ಬಣ್ಣದಲ್ಲಿ ಸಿಗಲಿದೆ. ನೋಕಿಯಾ 225 ಮಾರಾಟ ಅಕ್ಟೋಬರ್ 23 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮತ್ತು ನವೆಂಬರ್ 6 ರಿಂದ ಆಫ್ ಲೈನ್‌ನಲ್ಲಿ ಪ್ರಾರಂಭವಾಗಲಿದೆ.