ಭಾರತೀಯ ರೈಲ್ವೇ ಇಲಾಖೆಯ ಮೆಗಾ ರಾಷ್ಟ್ರೀಯ ರೈಲು ಯೋಜನೆ (ಎನ್ಆರ್ಪಿ) 2030 ಜಾರಿಗೆ ಬಂದ ಬಳಿಕ ಪ್ರಯಾಣಿಕರು ದೃಢೀಕರಣಗೊಂಡ ರೈಲ್ವೇ ಟಿಕೆಟ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.
ಭಾರತೀಯ ರೈಲ್ವೆ ಇಲಾಖೆ ರಾಷ್ಟ್ರೀಯ ರೈಲು ಯೋಜನೆ 2030ಯನ್ನು ಸಿದ್ಧಪಡಿಸುತ್ತಿದೆ. ಹಾಗೂ ಈ ಯೋಜನೆ ಸಂಬಂಧ ಸಾರ್ವಜನಿಕರಿಂದ ಮತ್ತು ವಿವಿಧ ಸಚಿವಾಲಯಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಎನ್ಆರ್ಪಿ 2030 ಪ್ರಕಾರ ಪ್ರತಿ ಪ್ರಯಾಣಿಕರಿಗೆ ದೃಢಪಡಿಸಿದ ಟಿಕೆಟ್ಗಳು ಲಭ್ಯವಾಗಲಿದ್ದು, ಯಾವುದೇ ವೇಟ್ ಲಿಸ್ಟ್ ಗಳು ಇರೋದಿಲ್ಲ ಎಂದು ಹೇಳಿದೆ.
ಅಲ್ಲದೇ ರಾಷ್ಟ್ರೀಯ ರೈಲು ಯೋಜನೆ 2030 ಮೂಲಕ ಭಾರತೀಯ ರೈಲ್ವೆ ಇಲಾಖೆ ಹೆಚ್ಚಿನ ಆದಾಯ ಗಳಿಸುವತ್ತಲೂ ಗಮನ ನೆಟ್ಟಿದೆ ಎನ್ನಲಾಗಿದೆ. ದೇಶದ ಒಟ್ಟು ಸರಕು ಸಾಗಣೆಯ 47 ಶೇಕಡಾದಷ್ಟು ಸಾಗಣೆ ಪೂರೈಸುವ ಗುರಿಯನ್ನ ಭಾರತೀಯ ರೈಲ್ವೆ ಇಲಾಖೆ ಹೊಂದಿದೆ.