ಈ ವರ್ಷದ ಆರಂಭದಿಂದಲೇ ಕೊರೊನಾ ಸಂಕಷ್ಟ ಎದುರಾಗಿದ್ದರಿಂದ ಭಾರತ ಸರ್ಕಾರ ವಾಹನದ ದಾಖಲೆಗಳ ವಿಚಾರದಲ್ಲಿ ಅನೇಕ ಬದಲಾವಣೆಯನ್ನ ಮಾಡಬೇಕಾಗಿ ಬಂತು.
ವಾಹನಾ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ವಾಹನ ವಿಮೆ ಸೇರಿದಂತೆ ಇತರೆ ದಾಖಲೆಗಳನ್ನ ನವೀಕರಿಸುವ ಗಡುವಿನ ದಿನಾಂಕವನ್ನ ಸಾರಿಗೆ ಸಚಿವಾಲಯ ಮುಂದೂಡುತ್ತಲೇ ಬಂದಿದೆ.
ಒಟ್ಟಾರೆಯಾಗಿ ಈ ಗಡುವನ್ನ ಬರೋಬ್ಬರಿ 9 ತಿಂಗಳುಗಳ ಕಾಲ ವಿಸ್ತರಿಸಲಾಗಿದೆ. ಆದರೆ ಈ ಗಡುವು ವಿಸ್ತರಣೆ ಇದೀಗ ಕೊನೆಗೊಂಡಿದೆ. ವಾಹನ ಸಂಬಂಧಿತ ದಾಖಲೆಗಳ ನವೀಕರಣಕ್ಕೆ ಡಿಸೆಂಬರ್ 31 ಕೊನೆಯ ಗಡುವಾಗಿದೆ. ಈ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಾರಿಗೆ ಸಚಿವಾಲಯ ಹೇಳಿದೆ.
ಕೊರೊನಾ ವೈರಸ್ನಿಂದಾಗಿ ಉಂಟಾದ ಸಮಸ್ಯೆಯಿಂದಾಗಿ ದೇಶಾದ್ಯಂತ ಟ್ರಾಫಿಕ್ ಪೊಲೀಸರು ಅವಧಿ ಮೀರಿದ ವಾಹನದ ದಾಖಲೆಗಳಿಗೆ ದಂಡ ವಿಧಿಸುತ್ತಿರಲಿಲ್ಲ. ಆದರೆ ಜನವರಿ 1ರಿಂದ ಅವಧಿ ಮೀರಿದ ದಾಖಲೆಗಳನ್ನ ಹೊಂದಿರುವ ವಾಹನ ಮಾಲೀಕರಿಗೆ ಪೊಲೀಸರು ಚಲನ್ ನೀಡಲಿದ್ದಾರೆ.