alex Certify ‘ಆಧಾರ್’ ದುರ್ಬಳಕೆಯಾಗಿರುವ ಅನುಮಾನವಿದೆಯಾ…? ಹಾಗಾದ್ರೆ ಹೀಗೆ ಚೆಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಧಾರ್’ ದುರ್ಬಳಕೆಯಾಗಿರುವ ಅನುಮಾನವಿದೆಯಾ…? ಹಾಗಾದ್ರೆ ಹೀಗೆ ಚೆಕ್ ಮಾಡಿ

ನವದೆಹಲಿ: ಆದಾಯ ತೆರಿಗೆ ಸಲ್ಲಿಸುವಿಕೆಯಿಂದ ಹಿಡಿದು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವವರೆಗೆ ಹಲವಾರು ಸೇವೆಗೆ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ.

ಗುರುತಿಸುವಿಕೆಗೆ ಆಧಾರ್ ಸಹ ಒಂದು ಪ್ರಮುಖ ಪುರಾವೆಯಾಗಿ ಕಾಣಿಸುತ್ತಿದೆ. ಆಧಾರ್ ಆನ್‌ಲೈನ್ ಸೇವೆಗಳನ್ನು ಪಡೆಯಲು, 12-ಅಂಕಿಯ ಗುರುತಿನ ಸಂಖ್ಯೆಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆ ಹೊಂದಿರುವುದು ಸಹ ಮುಖ್ಯವಾಗಿದೆ.

ಈ ನಡುವೆ, ಆಧಾರ್ ಬಳಕೆಯ ಟ್ರ್ಯಾಕ್ ಗಾಗಿ ಯುಐಡಿಎಐ ನಿಮಗೆ ಆನ್‌ಲೈನ್ ಆಯ್ಕೆಯನ್ನು ಸಹ ನೀಡಲಿದೆ. ಇದರಲ್ಲಿ ಕಳೆದ 6 ತಿಂಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಎಲ್ಲಿ ಮತ್ತು ಎಷ್ಟು ಬಾರಿ ಬಳಸಲ್ಪಟ್ಟಿದೆ ಎಂಬುದನ್ನು ಪರಿಶೀಲಿಸಬಹುದು. ಆಧಾರ್ ಅಥಂಟಿಕೇಶನ್ ಹಿಸ್ಟರಿ ಸೇವೆ ಮೂಲಕ ಈ ಸೌಲಭ್ಯ ಲಭ್ಯವಿದೆ.

ಈ ಸೇವೆಯನ್ನು ಯುಐಡಿಎಐ ವೆಬ್‌ಸೈಟ್‌ನಲ್ಲಿ ಹೋಸ್ಟ್ ಮಾಡಲಾಗಿದೆ. ಈ ಸೌಲಭ್ಯವು ಆಧಾರ್ ಕಾರ್ಡ್ ಹೊಂದಿರುವವರು ಈ ಹಿಂದೆ ಮಾಡಿದ ಬಳಕೆಯ ಸಂಪೂರ್ಣ ವಿವರವನ್ನು ಒದಗಿಸುತ್ತದೆ.

ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿವರಗಳನ್ನು ಪರಿಶೀಲಿಸಲು https://resident.uidai.gov.in/aadhaar-auth-history ಗೆ ಲಾಗ್ ಇನ್ ಮಾಡಬಹುದು. ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ಸಂಖ್ಯೆ / ವಿಐಡಿ ಬಳಸಿ ಮತ್ತು ವೆಬ್‌ಸೈಟ್‌ನಲ್ಲಿನ ನಿರ್ದೇಶನ ಅನುಸರಿಸಿ ಬಳಕೆ ಇತಿಹಾಸ ಪರಿಶೀಲಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...