ನವದೆಹಲಿ: ಸ್ವಯಂಚಾಲಿತ ಟೆಲ್ಲರ್ ಮೆಷಿನ್‌ಗಳಲ್ಲಿ(ಎಟಿಎಂ) 2,000 ರೂ. ನೋಟುಗಳನ್ನು ತುಂಬಲು ಅಥವಾ ತುಂಬದಿರಲು ಬ್ಯಾಂಕ್ ಗಳಿಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ. ಬ್ಯಾಂಕ್ ನವರು ನಗದು ವಿತರಣಾ ಯಂತ್ರಗಳನ್ನು ಲೋಡ್ ಮಾಡಲು ತಮ್ಮದೇ ಆದ ಆಯ್ಕೆ ಮಾಡುತ್ತಾರೆ ಎಂದು ಸಂಸತ್ತಿಗೆ ಸೋಮವಾರ ತಿಳಿಸಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿ, ಎಟಿಎಂಗಳಲ್ಲಿ 2000 ರೂಪಾಯಿ ನೋಟುಗಳನ್ನು ತುಂಬದಂತೆ ಬ್ಯಾಂಕ್‌ಗಳಿಗೆ ಯಾವುದೇ ಸೂಚನೆ ನೀಡಿಲ್ಲ. ಹಿಂದಿನ ಬಳಕೆ, ಗ್ರಾಹಕರ ಅಗತ್ಯತೆ ಇತ್ಯಾದಿಗಳ ಆಧಾರದ ಮೇಲೆ ಬ್ಯಾಂಕ್ ಗಳು ಎಟಿಎಂಗಳಿಗೆ ಮೊತ್ತ ಮತ್ತು ಮುಖಬೆಲೆಯ ಅಗತ್ಯತೆಯ ತಮ್ಮದೇ ಆದ ಮೌಲ್ಯಮಾಪನವನ್ನು ಮಾಡುತ್ತವೆ ಎಂದು ತಿಳಿಸಿದ್ದಾರೆ.