alex Certify ಆಧಾರ್ ಕಾರ್ಡ್ ಇಲ್ಲದ ಫಲಾನುಭವಿಗಳಿಗೆ ಗುಡ್ ನ್ಯೂಸ್: ಕೊರೋನಾ ಲಸಿಕೆ ಸೇರಿ ಯಾವುದೇ ಸೇವೆಗೆ ಕಡ್ಡಾಯವಲ್ಲ ಆಧಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಇಲ್ಲದ ಫಲಾನುಭವಿಗಳಿಗೆ ಗುಡ್ ನ್ಯೂಸ್: ಕೊರೋನಾ ಲಸಿಕೆ ಸೇರಿ ಯಾವುದೇ ಸೇವೆಗೆ ಕಡ್ಡಾಯವಲ್ಲ ಆಧಾರ್

ನವದೆಹಲಿ: ಆಧಾರ್ ಕಾರ್ಡ್ ಇಲ್ಲವೆಂದು ಯಾವುದೇ ಸೇವೆಯನ್ನು ನಿರಾಕರಿಸುವಂತಿಲ್ಲ. ಯೋಜನೆಗಳಿಗೆ ಪಲಾನುಭವಿಯ ಆಯ್ಕೆ ವೇಳೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ತಿಳಿಸಿದೆ.

ಆಧಾರ್ ಕಾರ್ಡ್ ಇಲ್ಲದಿದ್ದರೂ ಫಲಾನುಭವಿಗಳನ್ನು ಗುರುತಿಸಬಹುದಾಗಿದೆ. ಫಲಾನುಭವಿಗಳನ್ನು ಗುರುತಿಸುವ ಸಂದರ್ಭದಲ್ಲಿ ಆಧಾರ್ ಕಡ್ಡಾಯವಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದಿಂದ ಆದೇಶ ಹೊರಡಿಸಲಾಗಿದೆ. ದೇಶದಲ್ಲಿ ಕೊರೊನಾದಿಂದ ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗಿದೆ.

ಆಧಾರ್ ಇಲ್ಲದ ವ್ಯಕ್ತಿಗೆ ಕೊರೋನಾ ಲಸಿಕೆ ಅಥವಾ ಕೊರೋನಾ ಸಂಬಂಧಿತ ಸೇವೆಯನ್ನು ನಿರಾಕರಿಸಲಾಗುವುದಿಲ್ಲವೆಂದು ತಿಳಿಸಲಾಗಿದೆ. ಯಾವುದೇ ಅಗತ್ಯತೆಯನ್ನು ನೀಡುವ ಸಂದರ್ಭದಲ್ಲಿ ಆಧಾರ್ ಇಲ್ಲದ ಕಾರಣಕ್ಕೆ ನಿರಾಕರಿಸಬಾರದು. ಕೊರೋನಾ ಲಸಿಕೆ, ಔಷಧ, ಆಸ್ಪತ್ರೆಗೆ ದಾಖಲಾಗಲು ಮತ್ತು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಆಧಾರ್ ಕಡ್ಡಾಯವಾಗುವುದಿಲ್ಲ.

ಆಧಾರ್ ಇಲ್ಲದಿದ್ದರೆ ಅಥವಾ ಕೆಲವು ಕಾರಣದಿಂದ ಆಧಾರ್ ಆನ್ಲೈನ್ ಪರಿಶೀಲನೆ ಯಶಸ್ವಿಯಾಗದಿದ್ದರೂ ಸಂಬಂಧಿಸಿದ ಸಂಸ್ಥೆ ಅಥವಾ ಇಲಾಖೆ ಆಧಾರ್ ಕಾಯ್ದೆ ಅನ್ವಯ ಸೇವೆಯನ್ನು ಒದಗಿಸಬೇಕಾಗುತ್ತದೆ. ಆಧಾರ್  ಇಲ್ಲದ ಕಾರಣಕ್ಕೆ ಯಾವುದೇ ಸೇವೆ ಅಥವಾ ಪ್ರಯೋಜನ ನೀಡಲು ನಿರಾಕರಿಸಿದಲ್ಲಿ ಸಂಬಂಧಿಸಿದ ಇಲಾಖೆಗಳ ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಯುಐಡಿಎಐ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...