ನವದೆಹಲಿ: ಭಾರತ ರಾಷ್ಟ್ರೀಯ ಪೇಮೆಂಟ್ಸ್ ನಿಗಮ(NPCI) ರುಪೇ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ನಲ್ಲಿ(UPI) ಎರಡು ಸಾವಿರ ರೂ.ವರೆಗಿನ ವ್ಯವಹಾರಕ್ಕೆ ರುಪೇ ಕಾರ್ಡ್ ಬಳಕೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಆರ್ಬಿಐ ನಿರ್ದೇಶನದ ಅನ್ವಯ ರುಪೇ ಕ್ರೆಡಿಟ್ ಕಾರ್ಡ್ ಬಳಕೆಗೆ ಶುಲ್ಕ ವಿಧಿಸುವುದಿಲ್ಲ. ನಾಲ್ಕು ವರ್ಷಗಳಿಂದ ಈ ಕಾರ್ಡ್ ಬಳಕೆಯಲ್ಲಿದ್ದು, ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಸ್ವೀಕೃತವಿದೆ. ಚಿಲ್ಲರೆ ಮತ್ತು ವಾಣಿಜ್ಯ ವಲಯಗಳಿಗೆ ರುಪೇ ಕಾರ್ಡ್ ಗಳನ್ನು ನೀಡಲಾಗುತ್ತಿದೆ.
RBI ರುಪೇ ಕ್ರೆಡಿಟ್ ಕಾರ್ಡ್ಗಳನ್ನು UPI ಗೆ ಲಿಂಕ್ ಮಾಡಲು ಅನುಮೋದಿಸಿದೆ, ಇದು ಗ್ರಾಹಕರಿಗೆ ತಡೆರಹಿತ, ಡಿಜಿಟಲ್ ಸಕ್ರಿಯಗೊಳಿಸಿದ ಕ್ರೆಡಿಟ್ ಕಾರ್ಡ್ ಅನುಭವ ನೀಡುತ್ತದೆ. ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ಗಳನ್ನು ಬಳಸಲು ಸುಲಭ ಮತ್ತು ಹೆಚ್ಚಿದ ಅವಕಾಶದಿಂದ ಪ್ರಯೋಜನ ಪಡೆಯುತ್ತಾರೆ.