ನವದೆಹಲಿ: ಎಸಿ ಕೋಚ್ ಗಳಲ್ಲಿ ಇನ್ನುಮುಂದೆ ಬ್ಲಾಂಕೆಟ್ ಕೊಡುವುದಿಲ್ಲವೆಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ಕೊರೋನಾ ಬಿಕ್ಕಟ್ಟು ತಿಳಿಯಾದ ನಂತರವೂ ರೈಲಿನ ಎಸಿ ಕೋಚ್ ಗಳಲ್ಲಿ ಬ್ಲಾಂಕೆಟ್ ನೀಡುವುದಿಲ್ಲ. ಪ್ರಯಾಣಿಕರೇ ಮನೆಯಿಂದ ಬ್ಲಾಂಕೆಟ್ ಗಳನ್ನು ತರಬೇಕಿದೆ ಎಂದು ಹೇಳಿದ್ದಾರೆ.
ಕೋವಿಡ್ ಬಿಕ್ಕಟ್ಟು ತಿಳಿಯಾದ ನಂತರವೂ ಈ ವ್ಯವಸ್ಥೆ ಮುಂದುವರೆಯಲಿದೆ. ಪ್ರಯಾಣದ ಸಂದರ್ಭದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಒಂದು ಸಲ ಬಳಕೆ ಮಾಡಬಹುದಾದ ಹಾಸಿಗೆಯನ್ನು ಮಾತ್ರ ಪ್ರಯಾಣಿಕರಿಗೆ ಮುಂದಿನ ದಿನಗಳಲ್ಲಿ ನೀಡಲಿದ್ದು, ಬ್ಲಾಂಕೆಟ್ ಗಳನ್ನು ಪ್ರಯಾಣಿಕರು ತರಬೇಕಿದೆ ಎಂದು ಅವರು ತಿಳಿಸಿದ್ದಾರೆ.