ಹೆಚ್ಚುತ್ತಿರುವ ಮಾಲಿನ್ಯ ಮತ್ತು ಬದಲಾಗುತ್ತಿರುವ ಸಮಯದಿಂದಾಗಿ ಸಿಎನ್‌ಜಿ ವಾಹನಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಮಧ್ಯೆ ದೇಶದ ಮೊದಲ ಸಿಎನ್‌ಜಿ ಟ್ರ್ಯಾಕ್ಟರ್ ಬಿಡುಗಡೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಟ್ರ್ಯಾಕ್ಟರ್ ಬಿಡುಗಡೆ ಮಾಡಿದ್ದಾರೆ. ಇದು ಕೃಷಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಜೊತೆಗೆ ರೈತರಿಗೆ ನೇರವಾಗಿ ಪ್ರಯೋಜನ ನೀಡಲಿದೆ.
ಗೂಗಲ್ ಸಿಇಓ ವಿರುದ್ಧ UP ಪೊಲೀಸರಿಂದ ಕೇಸ್: ಬಳಿಕ ಸುಂದರ್ ಪಿಚ್ಚೈ ಹೆಸರು ಕೈ ಬಿಟ್ಟ ಅಧಿಕಾರಿಗಳು
ಸಿಎನ್‌ಜಿ ಟ್ರ್ಯಾಕ್ಟರನ್ನು ರೋಮಾಟ್ ಟೆಕ್ನೋ ಸೊಲ್ಯೂಷನ್ ಮತ್ತು ಟೊಮಾಸೆಟ್ಟೊ ಅಸಿಲ್ ಇಂಡಿಯಾ ತಯಾರಿಸಿದೆ. ಈ ಟ್ರ್ಯಾಕ್ಟರ್ ಸಹಾಯದಿಂದ ರೈತರ ಆದಾಯ ಹೆಚ್ಚಾಗಲಿದೆ. ಸಿಎನ್‌ಜಿ ಟ್ರ್ಯಾಕ್ಟರ್ ಪ್ರತಿ ವರ್ಷ ರೈತರ ಇಂಧನ ವೆಚ್ಚದಲ್ಲಿ 1 ಲಕ್ಷ ರೂಪಾಯಿಗಳನ್ನು ಉಳಿಸುವ ನಿರೀಕ್ಷೆಯಿದೆ. ಖರ್ಚುಗಳನ್ನು ಕಡಿತಗೊಳಿಸಿದರೆ ಉಳಿತಾಯ ಹೆಚ್ಚಾಗಲಿದೆ.
ಸಿಎನ್‌ಜಿ ಟ್ರ್ಯಾಕ್ಟರನ್ನು ಹೊಸ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸಿಎನ್‌ಜಿ ಟ್ರ್ಯಾಕ್ಟರ್ ಡೀಸೆಲ್ ಟ್ರ್ಯಾಕ್ಟರ್‌ಗಿಂತ ಶೇಕಡಾ 70 ರಷ್ಟು ಕಡಿಮೆ ಹೊರಸೂಸುವಿಕೆ ಸಾಮರ್ಥ್ಯ ಹೊಂದಿದ್ದು, ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಸಿಎನ್‌ಜಿ ಅಳವಡಿಸಲಾಗಿರುವ ಟ್ರ್ಯಾಕ್ಟರ್ ಗಳಿಗೆ ಸೀಸ ಇರುವುದಿಲ್ಲ. ಇದರಿಂದಾಗಿ ಎಂಜಿನ್ ದೀರ್ಘಕಾಲದವರೆಗೆ ಕಾರ್ಯ ನಿರ್ವಹಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚುತ್ತಿದ್ದು, ಸಿಎನ್‌ಜಿ ಟ್ರ್ಯಾಕ್ಟರ್ ಇಂತಹ ಪರಿಸ್ಥಿತಿಯಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ. ಸಿಎನ್‌ಜಿ ಟ್ರ್ಯಾಕ್ಟರ್‌ನ ಮೈಲೇಜ್ ಡೀಸೆಲ್ ಟ್ರ್ಯಾಕ್ಟರ್‌ಗಿಂತ ಉತ್ತಮವಾಗಿದೆ.