ನವದೆಹಲಿ: ಪ್ರಸ್ತುತ ಇರುವ ಫಾಸ್ಟ್ಯಾಗ್ ಮತ್ತು ಟೋಲ್ ಪ್ಲಾಜಾ ವ್ಯವಸ್ಥೆಗಳು ಇನ್ನೂ ಆರು ತಿಂಗಳಲ್ಲಿ ಇತಿಹಾಸ ಸೇರುತ್ತವೆ. ಪ್ರಸ್ತುತ ಇರುವ ಹೆದ್ದಾರಿ ಟೋಲ್ ಪ್ಲಾಜಾ ವ್ಯವಸ್ಥೆಯನ್ನು ಬದಲಾವಣೆ ಮಾಡಲಿದ್ದು, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ಉದ್ಯಮ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈ ಬಗ್ಗೆ ಮಾಹಿತಿ ನೀಡಿದ್ದು, ಹೆದ್ದಾರಿಯಲ್ಲಿ ಮತ್ತು ಟೋಲ್ ಪ್ಲಾಜಾಗಳ ಸಮೀಪ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ವಾಹನ ಸವಾರರಿಂದ ಪ್ರಯಾಣಿಸಿದ ನಿಖರ ದೂರಕ್ಕೆ ಮಾತ್ರ ಶುಲ್ಕ ಪಡೆಯುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ,
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಸ್ತುತ ಟೋಲ್ ಪ್ಲಾಜಾ ಮೂಲಕ 40,000 ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದು, ಇನ್ನೂ ಎರಡರಿಂದ ಮೂರು ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.