ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕವನ್ನು ಪರಿಷ್ಕರಿಸಿದ್ದು, ಸೆಪ್ಟೆಂಬರ್ 1 ರಿಂದ ಹಾಸನ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ
ಬೆಂಗಳೂರು -ತುಮಕೂರು -ಹಾಸನ -ಶಿವಮೊಗ್ಗ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ನೆಲಮಂಗಲ ಮತ್ತು ಬೆಳ್ಳೂರು ಕ್ರಾಸ್ ಮೂಲಕ ಹಾದು ಹೋಗಬೇಕಿದ್ದು, ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಲಘು ವಾಣಿಜ್ಯ ವಾಹನಗಳ ಮಾಸಿಕ ಪಾಸ್ ದರ 75 ರೂ.ರಷ್ಟು ಏರಿಕೆಯಾಗಿದೆ
ಬಸ್ ಮತ್ತು ಟ್ರಕ್ ಗಳು ಒಂದು ಸಲಕ್ಕೆ ಹಾದುಹೋಗುವ ಶುಲ್ಕವನ್ನು 5 ರೂ., 10 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ತಿಂಗಳಿಗೆ 4865 ರೂ. ಪಾವತಿಸಬೇಕಿದೆ.
ಒಂದೇ ಸಲಕ್ಕೆ ಟೋಲ್ ಪ್ಲಾಜಾ ಮೂಲಕ ಹಾದು ಹೋಗುವ ಕಾರುಗಳಿಗೆ 45 ಹಾಗೂ ಹೋಗಿ ಬರುವ ವಾಹನಗಳಿಗೆ 70 ರೂ. ರೂ. ಪಾವತಿಸಬೇಕಿದೆ. ಮಾಸಿಕ ಪಾಸ್ ದರ 1390 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.