2022 ರ ಜನವರಿ 1 ರ ಇಂದಿನಿಂದಲೇ ಜನಸಾಮಾನ್ಯರಿಗೆ ಜೀವನ ದುಬಾರಿಯಾಗಲಿದೆ. ತೆರಿಗೆ, ಕಚ್ಚಾವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ಕಾರಣಗಳಿಂದ ಕೆಲವು ವಸ್ತುಗಳು ಮತ್ತು ಸೇವೆಗಳ ದರ ದುಬಾರಿಯಾಗಿ ಜನರ ಜೀವನದ ಮೇಲೆ ಪರಿನಾಮ ಬೀರಲಿದೆ.
ಪಾದರಕ್ಷೆಗೆ ಶೇಕಡ 12 ರಷ್ಟು GST ಹಾಕುವುದರಿಂದ ಚಪ್ಪಲಿ ಬೆಲೆ ಏರಿಕೆಯಾಗಲಿದೆ.
ನಿತ್ಯಬಳಕೆಯ ಸೋಪು, ಟೀ ಪುಡಿ, ಕಾಫಿ ಪುಡಿ ದರ ಮೂರು ತಿಂಗಳಲ್ಲಿ ಶೇಕಡ 4 ರಿಂದ 10 ರಷ್ಟು ಏರಿಕೆ
ರೆಫ್ರಿಜರೇಟರ್, ವಾಷಿಂಗ್ ಮಷೀನ್, ಎಸಿ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ 4 ರಿಂದ 10ರಷ್ಟು ಹೆಚ್ಚಳವಾಗಲಿದೆ.
ಕಾರ್, ದ್ವಿಚಕ್ರವಾಹನಗಳ ಬೆಲೆ ಕೂಡ ಶೇಕಡ ಐದರಷ್ಟು ಹೆಚ್ಚಳವಾಗಲಿದೆ.
ಮನೆ ಬಾಗಿಲಿಗೆ ಫುಡ್ ಪೂರೈಸುವ ಸ್ವಿಗ್ಗಿ ಜೊಮ್ಯಾಟೊ ಮೊದಲಾದ ಕಂಪನಿಗಳ ಸೇವೆಗೆ ಶೇಕಡ 5 ರಷ್ಟು ಜಿಎಸ್ಟಿ ಹಾಕಲಾಗುತ್ತದೆ.
ಓಲಾ, ಉಬರ್ ನಂತಹ ಆಪ್ ಆಧಾರಿತ ಸೇವೆಗಳ ಕಾರ್ ರಿಕ್ಷಾ, ಬೈಕ್ ಬಳಸಿದರೆ ಶೇಕಡ 5 ರಷ್ಟು ಜಿಎಸ್ಟಿ ಪಾವತಿಸಬೇಕಿದೆ.