ನವದೆಹಲಿ: ಹೊಸ ವರ್ಷಕ್ಕೆ ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬಹುತೇಕ ಕಾರ್ ಕಂಪನಿಗಳು ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ.
ಕಾರ್ ಗಳ ಬಿಡಿ ಭಾಗಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಮುಖ ತಯಾರಿಕಾ ಕಂಪನಿಗಳಾದ ಆಡಿ, ಮರ್ಸಿಡಿಸ್ ಬೆಂಜ್, ರೆನಾಲ್ಟ್, ಕಿಯಾ ಇಂಡಿಯಾ, ಎಂಜಿ ಮೋಟಾರ್ ಜನವರಿಯಿಂದ ಕಾರ್ ಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ.
ಈಗಾಗಲೇ ಮಾರುತಿ ಸುಜುಕಿ ಮತ್ತು ಟಾಟಾ ಮೋಟರ್ ಕಾರ್ ಗಳ ಬೆಲೆ ಏರಿಕೆ ಮಾಡುವುದಾಗಿ ಹೇಳಿದ್ದು, ಇವುಗಳ ಸಾಲಿಗೆ ಈ ಕಂಪನಿಗಳು ಕೂಡ ಸೇರಿಕೊಂಡಿವೆ. ಆಡಿ ಜನವರಿ 1 ರಿಂದ ಎಲ್ಲಾ ಮಾಡೆಲ್ ಗಳ ಕಾರ್ ಗಳ ಬೆಲೆ ಶೇಕಡ 1.7 ರಷ್ಟು ಏರಿಕೆ ಮಾಡುವುದಾಗಿ ತಿಳಿಸಿದೆ.
ಬೆಂಜ್ ಕಂಪನಿ ಶೇಕಡ 5 ರಷ್ಟು ಬೆಲೆ ಏರಿಕೆ ಮಾಡಲಿದೆ. ಕಿಯಾ ಮಾಡೆಲ್ ಗಳನ್ನು ಆಧರಿಸಿ ಕಾರ್ ಮೇಲೆ 50,000 ರೂ.ವರೆಗೆ ಏರಿಕೆ ಮಾಡಲಿದೆ. ಎಂಜಿ ಮೋಟಾರ್ ಶೇಕಡ 5 ರಷ್ಟು ದರ ಏರಿಕೆ ಮಾಡುವುದಾಗಿ ಹೇಳಲಾಗಿದೆ.