ನವದೆಹಲಿ: ದೇಶದಲ್ಲಿ ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ವಾರಕ್ಕೆ ನಾಲ್ಕು ದಿನ ಕೆಲಸ ಜಾರಿ, ನಿತ್ಯ 12 ಗಂಟೆ ಕೆಲಸದ ಅವಧಿ ಏರಿಕೆಯಾಗುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜುಲೈ 1 ರಿಂದ ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಯ ಆಧಾರದ ಮೇಲೆ ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.
ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಉದ್ಯೋಗಿಗಳ ಕೆಲಸದ ಅವಧಿ, ವೇತನ, ಭವಿಷ್ಯನಿಧಿಯಲ್ಲಿ ಕೊಡುಗೆ, ಗಳಿಕೆ ರಜೆ, ನಗದೀಕರಣ ಮೊದಲಾದವು ಬದಲಾವಣೆಯಾಗುವ ಸಾಧ್ಯತೆ ಇದೆ.
ಉದ್ಯೋಗಿಗಳ ವೇತನದ ಪ್ರಮಾಣ ಕಡಿಮೆಯಾಗಿ ಪಿಎಫ್ ಮತ್ತು ಗ್ರಾಚುಟಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ವಾರದಲ್ಲಿ ನಾಲ್ಕು ದಿನ ಕೆಲಸ, ಕೆಲಸದ ಅವಧಿ 12ಗಂಟೆಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಸರ್ಕಾರಿ ಇಲಾಖೆಗಳ ನೌಕರರಿಗೆ ವರ್ಷದಲ್ಲಿ 30 ದಿನ ರಜೆ, ರಕ್ಷಣಾ ಸಿಬ್ಬಂದಿಗೆ 60 ದಿನ ರಜೆ ಸೌಲಭ್ಯ ಇರಲಿದೆ. ಉದ್ಯೋಗಿಗಳು 300 ಗಳಿಕೆ ರಜೆಯನ್ನು ನಗದೀಕರಣ ಮಾಡಿಕೊಳ್ಳಬಹುದಾಗಿದೆ.