ನವದೆಹಲಿ: ಕಚೇರಿಗಳಲ್ಲಿ ಗರಿಷ್ಟ ಕೆಲಸದ ಸಮಯವನ್ನು 12 ಗಂಟೆಯವರೆಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಏಪ್ರಿಲ್ 1 ರಿಂದ ಜಾರಿಗೆ ತರಲಿರುವ ಹೊಸ ನಿಯಮ ದುಡಿಯುವ ವರ್ಗದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಸಂಸತ್ನಲ್ಲಿ ಅಂಗೀಕರಿಸಲಾದ ವೇತನ ಸಮಿತಿ ಮಸೂದೆಯಲ್ಲಿ ಪರಿಚಯಿಸಲಾದ ಬದಲಾವಣೆಯ ಒಂದು ಭಾಗ ಇದಾಗಿದೆ. ಹೊಸ ಕಾನೂನು ಪ್ರಕಾರ, 15 ರಿಂದ 30 ನಿಮಿಷದ ಹೆಚ್ಚುವರಿ ಕೆಲಸವನ್ನು ಓವರ್ ಟೈಮ್ ಎಂದು ಪರಿಗಣಿಸಲಾಗುತ್ತದೆ.
ನೌಕರರಿಗೆ ಪ್ರತಿ 5 ಗಂಟೆ ಕೆಲಸದ ನಂತರ ಅರ್ಧಗಂಟೆ ವಿರಾಮ ನೀಡಬೇಕು. ಇದರೊಂದಿಗೆ ಭವಿಷ್ಯನಿಧಿ ಮತ್ತು ಗ್ರಾಚುಟಿಗಳಲ್ಲಿ ಅನುಕೂಲ ಕಲ್ಪಿಸಬೇಕು. ಮೂಲವೇತನ ಒಟ್ಟು ವೇತನಕ್ಕಿಂತ ಶೇಕಡ 50ರಷ್ಟು ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.
ಮೂಲವೇತನ ಹೆಚ್ಚಳದಿಂದ ಪಿಎಫ್ ಕೂಡ ಹೆಚ್ಚಾಗಲಿದೆ. ಟೇಕ್ ಹೋಂ ಸಂಬಳ ಕಡಿಮೆಯಾಗಲಿದೆ. ಹೊಸ ನಿಯಮಗಳು ಹೆಚ್ಚಿನ ವೇತನ ಪಡೆಯುವ ನೌಕರರ ವೇತನ ರಚನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪಿಎಫ್ ಮತ್ತು ಗ್ರಾಚುಟಿ ಹೆಚ್ಚಿಸುವುದರಿಂದ ಕಂಪನಿಗಳ ವೆಚ್ಚವು ಹೆಚ್ಚಾಗಲಿದೆ ಎನ್ನಲಾಗಿದೆ.