ನವದೆಹಲಿ: ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಸಹಕಾರ ಸಚಿವಾಲಯ ಸ್ಥಾಪಿಸಲು ಮುಂದಾಗಿದೆ.
ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪುನಾರಚನೆ ನಡೆಯುತ್ತಿದ್ದು, ಸಹಕಾರ ಇಲಾಖೆಗೆ ಹೊಸ ಸಚಿವರನ್ನು ನೇಮಕ ಮಾಡಲಾಗುತ್ತದೆ.
ಸಹಕಾರದಿಂದ ಸಮೃದ್ಧಿ ಧ್ಯೇಯದೊಂದಿಗೆ ನೂತನ ಸಹಕಾರ ಸಚಿವಾಲಯ ಸ್ಥಾಪಿಸಲಾಗುತ್ತದೆ. ಸಹಕಾರ ಚಳವಳಿಯನ್ನು ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ, ಚೌಕಟ್ಟನ್ನು ಒದಗಿಸಲಾಗುತ್ತದೆ. ಸಹಕಾರ ಆಧಾರಿತ ಚಟುವಟಿಕೆ ಅಭಿವೃದ್ಧಿ ಉತ್ತೇಜನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.