ಸತತ 52 ವರ್ಷಗಳಿಂದ ಸಂಸದರಿಗೆ ಊಟ ಬಡಿಸಿದ್ದ ಭಾರತೀಯ ರೈಲ್ವೆ ಮುಂದಿನ ತಿಂಗಳಿನಿಂದ ತನ್ನ ಕಾರ್ಯ ಸ್ಥಗಿತಗೊಳಿಸಲಿದೆ. ಹೊಸ ಏಜನ್ಸಿಗಳಿಗೆ ದಾರಿ ಮಾಡಿಕೊಟ್ಟು ಅಡುಗೆ ಮನೆ ಹಾಗೂ ಕ್ಯಾಂಟೀನ್ನಿಂದ ಹೊರಬರಲಿದೆ.
1968ರಿಂದ ಸಂಸತ್ ಭವನದ ಎಲ್ಲ ಅಧಿಕಾರಿಗಳು, ಸಂಸದರ ಭೋಜನ ವ್ಯವಸ್ಥೆಯನ್ನ ಉತ್ತರ ರೈಲ್ವೆ ನೋಡಿಕೊಳ್ತಿತ್ತು. ಆದರೆ ಇದೀಗ ತನ್ನ 52 ವರ್ಷದ ಸೇವೆಯನ್ನ ನಿಲ್ಲಿಸಲಿರುವ ಉತ್ತರ ರೈಲ್ವೆ ನವೆಂಬರ್ 15ರಿಂದ ತನ್ನ ಕೆಲಸವನ್ನ ಬಂದ್ ಮಾಡಲಿದೆ.
ಇನ್ನು ನವೆಂಬರ್ 15ರಿಂದ ಸಂಸತ್ನ ಕ್ಯಾಂಟೀನ್ ಸೇವೆಯ ಜವಾಬ್ದಾರಿಯನ್ನಪ್ರವಾಸ ಅಭಿವೃದ್ಧಿ ನಿಗಮ (ಐಟಿಡಿಸಿ ) ನಿರ್ವಹಿಸಲಿದೆ. ಪ್ರಸ್ತುತ ಅಶೋಕ್ ಪಂಚತಾರಾ ಹೋಟೆಲ್ ಸಮೂಹವನ್ನ ಐಟಿಡಿಸಿ ನಿರ್ವಹಿಸುತ್ತಿದೆ.
ಸಂಸತ್ ಭವನದಲ್ಲಿ ಕಾರ್ಯ ನಿರ್ವಹಿಸ್ತಾ ಇರುವ ಉತ್ತರ ರೈಲ್ವೆಗೆ ಲೋಕಸಭೆ ಕಾರ್ಯಾಲಯದಿಂದ ನೀಡಲಾಗಿರುವ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಎಲ್ಲ ಪೀಠೋಪಕರಣಗಳನ್ನ ಹಿಂದಿರುಗಿಸುವಂತೆ ಲೋಕಸಭೆ ಕಾರ್ಯದರ್ಶಿಗಳ ಪತ್ರದ ಮೂಲಕ ಸೂಚನೆ ನೀಡಲಾಗಿದೆ.