ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಭಾರತೀಯರಿಗೆ ಖುಷಿ ಸುದ್ದಿ ನೀಡಲಿದೆ. ಗ್ರಾಹಕರಿಗೆ 349 ರೂಪಾಯಿಗಳ ಹೊಸ ಮೊಬೈಲ್ ಚಂದಾದಾರಿಕೆ ಯೋಜನೆಯನ್ನು ಶುರು ಮಾಡುವ ತಯಾರಿಯಲ್ಲಿದೆ. ಪ್ರಸ್ತುತ ಇದ್ರ ಪರೀಕ್ಷೆ ನಡೆಯುತ್ತಿದೆ.
ಹೊಸ ಯೋಜನೆಯನ್ನು ಮೊಬೈಲ್ ಪ್ಲಸ್ ಯೋಜನೆ ಎಂದು ಕರೆಯಲಾಗುವುದು. ಇದು ಮಾಸಿಕ 349 ರೂಪಾಯಿಗಳ ಯೋಜನೆಯಾಗಿದ್ದು, ಇದು ಎಚ್ಡಿ ಸ್ಟ್ರೀಮಿಂಗ್ ಬೆಂಬಲಿಸಲಿದೆ. ಎಚ್ಡಿ ಸ್ಟ್ರೀಮಿಂಗ್ ಜೊತೆಗೆ ಬಳಕೆದಾರರು ಮೊಬೈಲ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ಗಳಲ್ಲಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಬಹುದಾಗಿದೆ.
ನೆಟ್ಫ್ಲಿಕ್ಸ್ ಒಂದು ವರ್ಷದ ಹಿಂದೆ ಮಾಸಿಕ 199 ರೂಪಾಯಿ ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಿತ್ತು. ಕಂಪನಿಯು ಮತ್ತೊಮ್ಮೆ ಹೊಸ ಮಾಸಿಕ 349 ರೂಪಾಯಿಗಳ ಮೊಬೈಲ್ ಯೋಜನೆಯನ್ನು ಪ್ರಸ್ತುತಪಡಿಸಲು ಹೊರಟಿದೆ. ಇದು 199 ರೂಪಾಯಿ ಮತ್ತು 499 ರೂಪಾಯಿ ಮೂಲ ಯೋಜನೆಯ ನಡುವಿನ ಯೋಜನೆಯಾಗಿದೆ.