ಜಗತ್ತಿನ ಅತಿ ಸಿರಿವಂತ ವ್ಯಕ್ತಿಯಾಗಿ ಫ್ರಾನ್ಸ್‌ನ ಫ್ಯಾಶನ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರು ಸೋಮವಾರದ ಮಟ್ಟಿಗೆ ಹೊರಹೊಮ್ಮಿದ್ದಾರೆ. ಒಟ್ಟಾರೆ $186.3 ಶತಕೋಟಿ ಮೌಲ್ಯದ ಆಸ್ತಿಯೊಂದಿಗೆ ಈತ ಈಗ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿ ತಿಳಿಸುತ್ತಿದೆ.
ಎಲ್ಲ ಕಂಪನಿ ಬ್ಲೇಡ್ ವಿನ್ಯಾಸ ಒಂದೇ ರೀತಿ ಇರುತ್ತೆ ಏಕೆ ಗೊತ್ತಾ….?
ಎಲ್‌ವಿಎಂಎಚ್ ಬ್ರಾಂಡ್‌ನ ಚೇರ್ಮನ್ ಆಗಿರುವ ಅರ್ನಾಲ್ಟ್ ಅವರು ಅಮೆಜಾನ್‌ನ ಜೆಫ್ ಬೆಜೋಸ್‌ಗಿಂತ $300 ದಶಲಕ್ಷ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಇದೇ ವೇಳೆ, ಟೆಸ್ಲಾ ಸಿಇಓ ಎಲಾನ್ ಮಸ್ಕ್ ಬಳಿ $147.3 ಶತಕೋಟಿ ಮೌಲ್ಯದ ಆಸ್ತಿ ಇದೆ.
ದಂಗಾಗಿಸುತ್ತೆ ಭಾರತೀಯ ಮೂಲದ 4ರ ಪೋರಿಯ ಐಕ್ಯೂ ಸಾಮರ್ಥ್ಯ
ಮಾರ್ಚ್ 2020ರ ವೇಳೆ $76 ಶತಕೋಟಿಯಷ್ಟಿದ್ದ ಅರ್ನಾಲ್ಟ್‌ರ ಆಸ್ತಿ ಒಂದು ವರ್ಷ ಎರಡು ತಿಂಗಳು ಕಳೆಯುವ ಹೊತ್ತಿಗೆ $110.3 ಶತಕೋಟಿಯಷ್ಟು ಹೆಚ್ಚಳವಾಗಿದೆ. ಅರ್ನಾಲ್ಟ್ ಲೂಯಿ ವಿಟ್ಟಾನ್ ಹಾಗೂ ಮಾಟ್ ಹೆನೆಸೆ ಎಂಬ ಲಕ್ಸೂರಿ ಬ್ರಾಂಡ್‌ಗಳ ಮುಖ್ಯಸ್ಥರೂ ಹೌದು.