ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭರ್ಜಿ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಪಡೆದರು. ಜಾವೆಲಿನ್ ಎಸೆತದಲ್ಲಿ ಕಿಶೋರ್ ಕುಮಾರ್ ಜೆನಾ ಬೆಳ್ಳಿ ಪದಕ ಗೆದ್ದರು.
ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 81ಕ್ಕೆ ತಲುಪಿದೆ. ನೀರಜ್ ಚೋಪ್ರಾ 88.88 ರ ಬೃಹತ್ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು, ಇದು ಅವರ ಎರಡನೇ ಏಷ್ಯನ್ ಗೇಮ್ಸ್ ಚಿನ್ನದ ಪದಕವಾಗಿದೆ.