ಕೊರೊನಾ ಸಂಕಷ್ಟದ ಮಧ್ಯೆಯೇ ಇನ್ಫೋಸಿಸ್ ಸಿಬ್ಬಂದಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸೆಪ್ಟೆಂಬರ್ ವೇಳೆಗೆ ಸುಮಾರು 2.4 ಲಕ್ಷ ಉದ್ಯೋಗಿಗಳ ಪೈಕಿ ಅರ್ಧದಷ್ಟು ಉದ್ಯೋಗಿಗಳಿಗೆ ಬಡ್ತಿ ನೀಡಲು ಇನ್ಫೋಸಿಸ್ ಮುಂದಾಗಿದೆ. ಕಿರಿಯ ಮತ್ತು ಮಧ್ಯಮ ವರ್ಗದ 1.2 ಲಕ್ಷ ಉದ್ಯೋಗಿಗಳಿಗೆ ಬಡ್ತಿ ನೀಡಲಿದೆ.
ಕೋವಿಡ್ -19 ಸಾಂಕ್ರಾಮಿಕದಿಂದ ಏಪ್ರಿಲ್ ನಲ್ಲಿ ಬಡ್ತಿ ಸ್ಥಗಿತಗೊಂಡಿತ್ತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿ 10 ವರ್ಷಗಳಿಗಿಂತ ಕಡಿಮೆ ಕೆಲಸದ ಅನುಭವ ಹೊಂದಿರುವವರಿಗೆ ಬಡ್ತಿ ನೀಡಲಿದೆ.
ಕೊರೊನಾ ವೈರಸ್ ಕಾರಣ ಬಡ್ತಿಯನ್ನು ಮುಂದೂಡಿದ್ದೆವು. ಈಗ ಬಡ್ತಿ ಕೆಲಸ ಶುರು ಮಾಡಿದ್ದೇವೆಂದು ಇನ್ಫೋಸಿಸ್ ನ ಮಾನವ ಸಂಪನ್ಮೂಲ ಗುಂಪಿನ ಮುಖ್ಯಸ್ಥ ಕೃಷ್ಣ ಶಂಕರ್ ಹೇಳಿದ್ದಾರೆ. ಇನ್ಫೋಸಿಸ್, ಈ ವರ್ಷ ಕಿರಿಯ ಹಾಗೂ ಮಧ್ಯಮ ವರ್ಗದ ಉದ್ಯೋಗಿಗಳಿಗೆ ಬಡ್ತಿ ನೀಡ್ತಿರುವ ದೇಶದ ಮೊದಲ ಐಟಿ ಸಂಸ್ಥೆಯಾಗಿದೆ.