ನವದೆಹಲಿ: ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ(NPS) ಜಾರಿಗೊಳಿಸಿದ್ದು, ಇದರ ಅಡಿಯಲ್ಲಿ ಲಾಭನ್ನು ಪಡೆಯಲು, ಗುರುತಿಸಲು ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿಸಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ವ್ಯಾಪಾರಿಗಳು ಮತ್ತು ಸ್ವಯಂ-ಉದ್ಯೋಗಿಗಳಿಗೆ ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಳನ್ನು ಮೀರದಂತೆ ಸೆಪ್ಟೆಂಬರ್ 2019 ರಲ್ಲಿ ಆರಂಭಿಸಿದೆ. ಯೋಜನೆಯಡಿ ಫಲಾನುಭವಿಗಳು ಉಳಿತಾಯ ಮಾಡಬಹುದಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಎಂದರೇನು?
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ನಿರ್ವಹಿಸುತ್ತದೆ, ಇದು ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ 60 ವರ್ಷವಾದ ತಕ್ಷಣ ಮಾಸಿಕ 3000 ರೂ. ಸಿಗಲಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದೆ. 18 ರಿಂದ 40 ವರ್ಷದೊಳಗಿನ ವ್ಯಕ್ತಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು, ಇದರಲ್ಲಿ ಕೇಂದ್ರ ಸರ್ಕಾರವು ಮಾಸಿಕ ಕೊಡುಗೆಯ ಶೇಕಡ 50 ರಷ್ಟು ಪಾಲನ್ನು ನೀಡುತ್ತದೆ. ಉಳಿದ 50 ಶೇಕಡ ಕೊಡುಗೆಯನ್ನು ಫಲಾನುಭವಿ ಭರಿಸಬೇಕಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಗೆ ದಾಖಲಾಗುವುದು ಹೇಗೆ?
ವ್ಯಾಪಾರಿಗಳು, ಅಂಗಡಿಯವರು ಮತ್ತು ಸ್ವಯಂ-ಗಳಿಸುವ ವ್ಯಕ್ತಿಗಳು www.maandhan.in/vyapari ಎಂಬ ಅಧಿಕೃತ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಸ್ವಯಂ ನೋಂದಣಿ ಮಾಡಿಕೊಳ್ಳಬಹುದು.
ಅರ್ಹ ವ್ಯಕ್ತಿಗಳು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್‌ಸಿ) ಭೇಟಿ ನೀಡಿ ರಾಜ್ಯ ಪ್ರಾಯೋಜಿತ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, ವಾರ್ಷಿಕ 40 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯಕ್ತಿಗಳಿಗೆ GSTIN ಅಗತ್ಯವಿದೆ.
ಪ್ರಾರಂಭದ ಸಮಯದಲ್ಲಿ, ಕೇಂದ್ರ ಸರ್ಕಾರವು 2023-2024 ರ ವೇಳೆಗೆ 2 ಕೋಟಿ ಚಂದಾದಾರರನ್ನು ಸಾಧಿಸುವ ಗುರಿಯನ್ನು ಹೊಂದಿತ್ತು. ಸರ್ಕಾರದ ಅಂದಾಜಿನ ಪ್ರಕಾರ, ಸುಮಾರು 3 ಕೋಟಿ ಫಲಾನುಭವಿಗಳನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಡಿಯಲ್ಲಿ ತರಬಹುದು.