ಬೆಂಗಳೂರು: 2021ರ ಮಾರ್ಚ್ ಅಂತ್ಯದ ವೇಳೆಗೆ ನಬಾರ್ಡ್ ನಿಂದ 1.20 ಲಕ್ಷ ಕೋಟಿ ರೂಪಾಯಿ ಬೆಳೆ ಸಾಲ ವಿತರಿಸಲಾಗುವುದು. ಕೊರೋನಾ ಸಂಕಷ್ಟದ ನಡುವೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ನಬಾರ್ಡ್ 1.20 ಲಕ್ಷ ಕೋಟಿ ಬೆಳೆಸಾಲ ವಿತರಿಸುವ ಗುರಿ ಹೊಂದಿದೆ.
ನಬಾರ್ಡ್ ಅಧ್ಯಕ್ಷ ಜಿ.ಆರ್. ಚಿಂತಲ ಈ ಬಗ್ಗೆ ಮಾಹಿತಿ ನೀಡಿ, ವಾರ್ಷಿಕ ನಬಾರ್ಡ್ ನಿಂದ 90 ಸಾವಿರ ಕೋಟಿ ರೂಪಾಯಿ ಬೆಳೆ ಸಾಲವನ್ನು ವಿನಾಯಿತಿ ಬಡ್ಡಿ ದರದಲ್ಲಿ ನೀಡಲಾಗುವುದು. ಪ್ರಸಕ್ತ ಹಣಕಾಸು ವರ್ಷದಲ್ಲಿ 1.20 ಲಕ್ಷ ಕೋಟಿ ರೂಪಾಯಿ ಬೆಳೆ ಸಾಲವನ್ನು ರೈತರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ಕೃಷಿ ಮೂಲಸೌಕರ್ಯ ನಿಧಿ ಒದಗಿಸುವ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.