ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದು. ಬ್ಯಾಂಕ್ ಖಾತೆ ಸೇರಿದಂತೆ ಸರ್ಕಾರದ ಅನೇಕ ಸೇವೆಗಳಿಗೆ ಆಧಾರ್ ಅಗತ್ಯ. ಹಾಗಾಗಿ ಆಧಾರ್ ಕಾರ್ಡ್ ಕೇಂದ್ರದಲ್ಲಿ ಸದಾ ಜನಜಂಗುಳಿ ಇರುತ್ತದೆ. ಆಧಾರ್ ಕಾರ್ಡ್ ತಯಾರಿಸುವುದು ಮಾತ್ರವಲ್ಲ, ಆಧಾರ್ ಕಾರ್ಡ್ ನಲ್ಲಾದ ತಪ್ಪುಗಳ ತಿದ್ದುಪಡಿಯನ್ನು ಇದೇ ಕೇಂದ್ರದಲ್ಲಿ ಮಾಡಲಾಗುತ್ತದೆ. ಅನೇಕರಿಗೆ ಆಧಾರ್ ಕಾರ್ಡ್ ಕೇಂದ್ರ ಗಳಿಕೆಗೆ ಅವಕಾಶ ನೀಡುತ್ತದೆ ಎಂಬ ಸಂಗತಿ ಗೊತ್ತಿಲ್ಲ.
ನೀವೂ ಆಧಾರ್ ಕಾರ್ಡ್ ಫ್ರ್ಯಾಂಚೈಸಿ ಪಡೆದು ಗಳಿಕೆ ಶುರು ಮಾಡಬಹುದು. ಇದಕ್ಕೆ ಯುಐಡಿಎಐ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದರ ನಂತ್ರ ಆಧಾರ್ ಸೇವಾ ಕೇಂದ್ರ ತೆರೆಯಲು ಪರವಾನಗಿ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವ್ಯಕ್ತಿಯು ಆಧಾರ್ ದಾಖಲಾತಿ ಮತ್ತು ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಇದರ ನಂತರ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಆಧಾರ್ ಫ್ರ್ಯಾಂಚೈಸಿಗೆ ಪರವಾನಗಿ ಪಡೆಯುವುದು ಬಹಳ ಮುಖ್ಯ. ಇದಕ್ಕಾಗಿ ಮೊದಲು https://uidai.nseitexams.com/UIDAI/LoginAction_input.action ವೆಬ್ಸೈಟ್ಗೆ ಹೋಗಬೇಕು. ಹೊಸ ಬಳಕೆದಾರರ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. XML File ಮತ್ತು ಕೋಡ್ ಶೇರ್ ಮಾಡಲು ಕೇಳಲಾಗುತ್ತದೆ. https://resident.uidai.gov.in/offline-kyc ಗೆ ಭೇಟಿ ನೀಡುವ ಮೂಲಕ ಆಫ್ಲೈನ್ ಇ-ಆಧಾರ್ ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್ಲೋಡ್ ಮಾಡಿದ ನಂತರ ಮತ್ತೊಂದು ಫಾರ್ಮ್ ನಿಮ್ಮ ಮುಂದಿರುತ್ತದೆ. ಅದ್ರಲ್ಲಿ ಮಾಹಿತಿ ಭರ್ತಿ ಮಾಡಬೇಕು. ಫೋನ್ ಮತ್ತು ಇಮೇಲ್ ಐಡಿ, ಯೂಸರ್ ಐಡಿ ಮತ್ತು ಪಾಸ್ವರ್ಡ್ ಹಾಕಬೇಕು. ಇದ್ರ ಮೂಲಕ ಆಧಾರ್ ಪರೀಕ್ಷೆ ಮತ್ತು ಪ್ರಮಾಣೀಕರಣ ಪೋರ್ಟಲ್ಗೆ ಲಾಗಿನ್ ಆಗಬಹುದು. ನಂತ್ರ ಮುಂದುವರಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಮತ್ತೊಂದು ಫಾರ್ಮ್ ಬರುತ್ತದೆ. ಅಲ್ಲಿ ಎಲ್ಲ ಮಾಹಿತಿ ನೀಡಬೇಕು. ಫೋಟೋ ಮತ್ತು ಡಿಜಿಟಲ್ ಸಹಿ ಮಾಡಿ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕಾಗುತ್ತದೆ. ಮುಂದುವರಿಯಿರಿ ಕ್ಲಿಕ್ ಮಾಡಿದ ನಂತ್ರ ಹಣ ಪಾವತಿಸಬೇಕಾಗುತ್ತದೆ. ವೆಬ್ ಸೈಟ್ ನಲ್ಲಿ ಮೆನುಗೆ ಹೋಗಿ ಪಾವತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ರಶೀದಿ ಇಟ್ಟುಕೊಳ್ಳಬೇಕು.
ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ, 1 ರಿಂದ 2 ದಿನಗಳವರೆಗೆ ಕಾಯಬೇಕಾಗುತ್ತದೆ. ಎರಡು ದಿನದ ನಂತ್ರ ಮತ್ತೆ ವೆಬ್ಸೈಟ್ಗೆ ಲಾಗಿನ್ ಆಗಬೇಕು. ಅಲ್ಲಿ ಬುಕ್ ಸೆಂಟರ್ ಮೇಲೆ ಕ್ಲಿಕ್ ಮಾಡಿ ಮತ್ತು ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ. ಪರೀಕ್ಷೆ ತೆಗೆದುಕೊಳ್ಳಲು ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ಹೇಳಬೇಕು. ಸ್ವಲ್ಪ ಸಮಯದ ನಂತರ ಅಡ್ಮಿಟ್ ಕಾರ್ಡ್ ಸಿಗುತ್ತದೆ. ಅದನ್ನು ಡೌನ್ಲೋಡ್ ಮಾಡಿ, ಮುದ್ರಿಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ನೀವು ಆಧಾರ್ ಕೇಂದ್ರ ತೆರೆದು ಗಳಿಕೆ ಶುರು ಮಾಡಬಹುದು.