ವಂಚನೆ ತಪ್ಪಿಸಲು ಬ್ಯಾಂಕ್ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಹೊಸ ಖಾತೆಗಳನ್ನು ತೆರೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೆವೈಸಿ ಪೂರ್ಣಗೊಳಿಸುವ ಮೂಲಕ ಹಳೆಯ ಖಾತೆಯನ್ನು ಸಹ ನವೀಕರಿಸಬೇಕಾಗುತ್ತದೆ. ಆಧಾರ್ ಕಾರ್ಡ್ನೊಂದಿಗೆ ಬ್ಯಾಂಕ್ ನಂಬರ್ ಲಿಂಕ್ ಮಾಡಿದ್ರೆ ಸರ್ಕಾರವು ಸಬ್ಸಿಡಿ ಮತ್ತು ಇತರ ಪ್ರಯೋಜನಗಳನ್ನು ನೇರವಾಗಿ ಖಾತೆದಾರರ ಖಾತೆಗೆ ಕಳುಹಿಸುತ್ತದೆ. ಇದಿಲ್ಲವಾದ್ರೆ ಖಾತೆಗೆ ಹಣ ಸೇರುವುದಿಲ್ಲ.
ಕೆಲವೊಮ್ಮೆ ಆಧಾರ್ ಜೊತೆ ಬೇರೆ ಬ್ಯಾಂಕ್ ಖಾತೆ ನಂಬರ್ ಲಿಂಕ್ ಆಗಿದ್ದರೆ ಸಬ್ಸಿಡಿ ಹಣ ನಿಮ್ಮ ಖಾತೆ ಬದಲು ಬೇರೆಯವರ ಖಾತೆ ಸೇರುತ್ತದೆ. ನಿಮ್ಮ ಆಧಾರ್ ಜೊತೆ ಬೇರೆ ಯಾವ ಖಾತೆ ಲಿಂಕ್ ಆಗಿದೆ ಎಂಬುದನ್ನು ನೀವು ಮೊದಲು ತಿಳಿಯಬೇಕಾಗುತ್ತದೆ.
ಮೊದಲು ಯುಐಡಿಎಐ www.uidai.gov.in ನ ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ಮೇನ್ ಪೇಜ್ ಗೆ ಹೋದ ನಂತ್ರ ಎಂವೈ ಆಧಾರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆದುಕೊಂಡ ನಂತ್ರ ಆಧಾರ್ ಸೇವೆಗೆ ಹೋಗಬೇಕು. ಚೆಕ್ ಆಧಾರ್ ಅಥವಾ ಬ್ಯಾಂಕ್ ಲಿಂಕ್ ಆಯ್ಕೆ ಕ್ಲಿಕ್ ಮಾಡಬೇಕು. ಚೆಕ್ ಆಧಾರ್ / ಬ್ಯಾಂಕ್ ಲಿಂಕ್ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಅಲ್ಲಿ ಕೇಳಿದ ಮಾಹಿತಿ ನೀಡಬೇಕು. ಆಗ ನಿಮ್ಮ ಫೋನ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತ್ರ ಲಾಗಿನ್ ಬಟನ್ ಕ್ಲಿಕ್ ಮಾಡಬೇಕು. ಹೊಸ ಪುಟ ಓಪನ್ ಆದ್ಮೇಲೆ ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆ ಎಂಬುದು ನಿಮಗೆ ತಿಳಿಯುತ್ತದೆ.