ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಲಾಗಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಗೆ ಸರಾಸರಿ 35 ಪೈಸೆ ಹೆಚ್ಚಳ ಮಾಡಲಾಗಿದೆ.
ಆದರೆ, ಈ ವಿದ್ಯುತ್ ದರ ಏರಿಕೆಗೆ ತಾತ್ಕಾಲಿಕವಾಗಿದೆ. ಕಲ್ಲಿದ್ದಲು ದರ ಏರಿಕೆಯಿಂದ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಕಲ್ಲಿದ್ದಲು ದರ ಇಳಿಕೆಯಾದರೆ ವಿದ್ಯುತ್ ದರವನ್ನು ಕೂಡ ಇಳಿಕೆ ಮಾಡಲಾಗುವುದು ಹೇಳಲಾಗಿದೆ.
ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಉಡುಪಿಯಲ್ಲಿ ಮಾತನಾಡಿ, ಕಲ್ಲಿದ್ದಲು ಬೆಲೆ ಹೆಚ್ಚಾಗಿದ್ದರಿಂದ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದು ಕೇವಲ ತಾತ್ಕಾಲಿಕ ದರ ಹೆಚ್ಚಳ ಆಗಿದ್ದು, ಕಲ್ಲಿದ್ದಲು ದರ ಇಳಿಕೆಯಾದ ನಂತರ ವಿದ್ಯುತ್ ದರ ಕೂಡ ಹೇಳಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.