ಕೊರೊನಾ ವೈರಸ್ ಲಾಕ್‌ಡೌನ್ ತಂದಿಟ್ಟ ಸಂಕಷ್ಟದಲ್ಲಿ ಅನೇಕ ಮಂದಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಮುಂಬೈನ ಪಂಕಜ್ ನೆರುರ್ಕರ್ ಇಂಥವರಲ್ಲಿ ಒಬ್ಬರು.
ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ರೆಸ್ಟೋರೆಂಟ್ ನಡೆಸಿಕೊಂಡು ಮಾಲ್ವಾನೀ ಖಾದ್ಯಗಳನ್ನು ಉಣಬಡಿಸುತ್ತಾ ಜೀವನ ಸಾಗಿಸುತ್ತಿದ್ದ ಪಂಕಜ್ ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದರು. ’ಖಡ್ಪೇಸ್’ ಹೆಸರಿನ ಅವರ ರೆಸ್ಟೋರೆಂಟ್ ತನ್ನ ಶುಚಿ-ರುಚಿ ಖಾದ್ಯಗಳ ಮೂಲಕ ಜನಮೆಚ್ಚುಗೆ ಪಡೆದಿತ್ತು. ಆದರೆ ಸಾಂಕ್ರಮಿಕದ ಕಾರಣದಿಂದ ವ್ಯಾಪಾರ ಕ್ಷೀಣಿಸಿ ಪಂಕಜ್ ತಮ್ಮ ರೆಸ್ಟೋರೆಂಟ್ ಮುಚ್ಚಬೇಕಾಗಿ ಬಂದಿತ್ತು.
1.3 ಕೋಟಿ ರೂ. ಮೌಲ್ಯದ 216 ಚಿನ್ನದ ನಾಣ್ಯಗಳು ಪತ್ತೆ
ಆದರೆ ಈ ಹಿನ್ನಡೆಯಿಂದ ಎದೆಗುಂದದ ಪಂಕಜ್, ತಮ್ಮ ಮನೆಯಿಂದಲೇ ಅಡುಗೆ ಮಾಡಲು ಆರಂಭಿಸಿ ಅದನ್ನು ಮಾರಲು ಆರಂಭಿಸಿದರು. ತಮ್ಮ ಬಳಿ ಇದ್ದ ನ್ಯಾನೋ ಕಾರಿನ ಹಿಂಬದಿಯನ್ನೇ ಮಳಿಗೆಯನ್ನಾಗಿ ಮಾಡಿಕೊಂಡ ಪಂಕಜ್ ವಿಶಿಷ್ಟವಾದ ಫುಡ್ ಕಿಯಾಸ್ಕ್ ಅನ್ನೇ ರಚಿಸಿಬಿಟ್ಟರು. ಪಂಕಜ್ ಕೈರುಚಿ ಕಂಡಿದ್ದ ಹಳೆಯ ಗ್ರಾಹಕರು ಈಗ ಅವರಲ್ಲಿಗೆ ಬರುತ್ತಿದ್ದಾರೆ.
ಆತಿಥ್ಯದ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವ ಇರುವ ಪಂಕಜ್ ಗ್ರಾಂಡ್ ಹಯಾತ್ ಹೊಟೇಲ್‌ನಲ್ಲಿ ಶೆಫ್ ಆಗಿ ಕೆಲಸ ಮಾಡಿದ್ದರು. ಐರಿಷ್ ಹೌಸ್‌ನಲ್ಲಿ ಬ್ರಾಂಡ್ ಶೆಫ್ ಸಹ ಆಗಿದ್ದ ಪಂಕಜ್ 2019ರಲ್ಲಿ ಖಡ್ಪೇಸ್‌ಗೆ ಚಾಲನೆ ಕೊಟ್ಟಿದ್ದರು.