ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದ ಮುಖೇಶ್ ಅಂಬಾನಿ 11 ನೇ ಸ್ಥಾನಕ್ಕೆ ಇಳಿದಿದ್ದಾರೆ. ಬ್ಲೂಂಬರ್ಗ್ ಬಿಲಿಯನೇರ್ ರ್ಯಾಂಕಿಂಗ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ರ್ಯಾಂಕಿಂಗ್ ಕುಸಿತವಾಗಿದೆ.
ಈ ಮೊದಲು ನಾಲ್ಕನೇ ಸ್ಥಾನದಲ್ಲಿದ್ದ ಅವರು ಈಗ 11 ನೇ ಸ್ಥಾನದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ 6.62 ಲಕ್ಷ ಕೋಟಿ ರೂ. ಇದ್ದ ಅವರ ಸಂಪತ್ತು ಈಗ 5.63 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.
ರಿಲಯನ್ಸ್ ಷೇರುಗಳು 16% ನಷ್ಟವಾದ ಪರಿಣಾಮ ಈ ಬೆಳವಣಿಗೆ ನಡೆದಿದೆ. ರಿಲಯನ್ಸ್ ಷೇರಿನ ದರ ಕುಸಿತವಾಗಿದ್ದರೂ ಪ್ರಸಕ್ತ ವರ್ಷದ ದರ 33 ಪರ್ಸೆಂಟ್ ಜಾಸ್ತಿ ಇದೆ. ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂಪಾಯಿ ಸಂಪತ್ತು ಸೃಷ್ಟಿಯಾಗಿದೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದು, ಹಿಂದುಜ ಸಹೋದರರು, ಶಿವ ನಾಡರ್, ಗೌತಮ್ ಅದಾನಿ, ಅಜೀಮ ಪ್ರೇಮ್ ಜೀ ನಂತರದ ಸ್ಥಾನದಲ್ಲಿದ್ದಾರೆ.