ಎರಿಕ್ಸನ್‌ನ ಬಾಕಿ ಹಣ ಪಾವತಿಸಿದ್ದ ಅನಿಲ್ ಅಂಬಾನಿ ಜೈಲು ಶಿಕ್ಷೆಯಿಂದ ಪಾರಾಗಿದ್ದರು. ಮುಖೇಶ್ ಅಂಬಾನಿ, ಅನಿಲ್ ಅಂಬಾನಿಗೆ 458.77 ಕೋಟಿ ರೂಪಾಯಿ ಹಣ ನೀಡಿ ಅವ್ರು ಜೈಲು ಪಾಲಾಗುವುದನ್ನು ತಪ್ಪಿಸಿದ್ದರು. ಇದಕ್ಕೆ ಅನಿಲ್ ಅಂಬಾನಿ, ಮುಖೇಶ್ ಅಂಬಾನಿಗೆ ಕೃತಜ್ಞನೆ ಸಲ್ಲಿಸಿದ್ದರು.
ಅನಿಲ್ ಅಂಬಾನಿಗೆ, ಮುಖೇಶ್ ಅಂಬಾನಿ ಹಣ ನೀಡಿ ಉಪಕಾರ ಮಾಡಿದ್ದಾರೆ ಎನ್ನಲಾಗಿತ್ತು. ಆದ್ರೆ ಮುಖೇಶ್ ಅಂಬಾನಿ ಹಣವನ್ನು ದಾನದ ರೂಪದಲ್ಲಿ ನೀಡಿರಲಿಲ್ಲ. ಮುಖೇಶ್ ಕಂಪನಿ, ಅನಿಲ್ ಅಂಬಾನಿ ಕೆಲ ಆಸ್ತಿಗಳನ್ನು ಬಾಡಿಗೆಗೆ ಪಡೆದಿದ್ದರು. ಹಾಗೆ ಹಣವನ್ನು ಬಾಡಿಗೆ ರೂಪದಲ್ಲಿ ನೀಡಿದ್ದರು.
ವರದಿ ಪ್ರಕಾರ, ಅನಿಲ್ ಅಂಬಾನಿ ಚೀನಾ ಬ್ಯಾಂಕುಗಳೊಂದಿಗಿನ ಸಾಲ ವಿವಾದಕ್ಕೆ ಸಂಬಂಧಿಸಿದಂತೆ ಯುಕೆ ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಮುಖೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ಕಂಪನಿಯು ತಮ್ಮ ಕಂಪನಿಯ ಹಲವಾರು ಕಾರ್ಪೊರೇಟ್ ಆಸ್ತಿಗಳನ್ನು ಗುತ್ತಿಗೆಗೆ ಪಡೆದಿತ್ತು. ಅದರಿಂದ ನಮಗೆ ಸುಮಾರು 460 ಕೋಟಿ ರೂಪಾಯಿ ಸಿಕ್ಕಿದೆ. ಅದನ್ನು ಬಾಕಿ ತೀರಿಸಲು ಬಳಸಿಕೊಂಡಿದ್ದೇವೆ ಎಂದಿದ್ದರು.
ರಿಕ್ಸನ್ ಪ್ರಕರಣದಲ್ಲಿ, ಕೆಲವು ಕಾರ್ಪೊರೇಟ್ ಸ್ವತ್ತುಗಳನ್ನು ಗುತ್ತಿಗೆ ನೀಡುವ ಮೂಲಕ ನಿಧಿಯ ಅಗತ್ಯವನ್ನು ಪೂರೈಸಲಾಯಿತು. ಮುಖೇಶ್ ಅಂಬಾನಿ, ಅನಿಲ್ ಅಂಬಾನಿಗೆ ವೈಯಕ್ತಿಕವಾಗಿ ಯಾವುದೇ ಹಣವನ್ನು ಅಥವಾ ಯಾವುದೇ ಉಡುಗೊರೆಯನ್ನು ನೀಡಿಲ್ಲವೆಂದು ಅನಿಲ್ ಅಂಬಾನಿ ವಕ್ತಾರರು ಹೇಳಿದ್ದಾರೆ. ಆದ್ರೆ ಅನಿಲ್ ಅಂಬಾನಿ ಯಾವ ಆಸ್ತಿಯನ್ನು ಗುತ್ತಿಗೆಗೆ ನೀಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.