ಮೈಸೂರು: ಸಾಲ, ಸರ್ಕಾರದ ನೆರವು ಪಡೆಯಲು ಎಂ.ಎಸ್.ಎಂ.ಇ.ಗಳಿಗೆ “ಉದ್ಯಮ್ ರಿಜಿಸ್ಟ್ರೇಷನ್” ಪಡೆಯುವುದು ಕಡ್ಡಾಯವಾಗಿದೆ.
ಭಾರತ ಸರ್ಕಾರದ ಎಂ.ಎಸ್.ಎಂ.ಇ ಮಂತ್ರಾಲಯದ ಅಭಿವೃದ್ಧಿ ಆಯುಕ್ತರ ಕಛೇರಿಯ ಸೂಚನೆಯಂತೆ ಸಣ್ಣ ಕೈಗಾರಿಕೆಗಳು, ತಯಾರಿಕಾ ಮತ್ತು ಸೇವಾ ಉದ್ಯಮಗಳು ಈ ಹಿಂದೆ ಪಡೆದಿದ್ದ ಸಣ್ಣ ಕೈಗಾರಿಕಾ ನೋಂದಣಿ, ಉದ್ಯೋಗ ಆಧಾರ ಮೆಮೊರಂಡಗಳ ಅವಧಿ ಮಾರ್ಚ್ 31 ಕ್ಕೆ ಅಂತ್ಯವಾಗಲಿರುವ ಕಾರಣ ಕೂಡಲೇ ದಿನಾಂಕ: 01-07-2020 ರಿಂದ ಜಾರಿಗೆ ಬಂದಿರುವ “ಉದ್ಯಮ್ ರಿಜಿಸ್ಟ್ರೇಷನ್” ಪಡೆಯುವುದು ಕಡ್ಡಾಯ,
ಈ ನೋಂದಣಿ ಪಡೆದ ಉದ್ಯಮಗಳು ಬ್ಯಾಂಕುಗಳಿಂದ ರಿಯಾಯಿತಿ ಬಡ್ಡಿ ದರದ ಸಾಲ, ವಿಳಂಬ ಪಾವತಿ ಕಾಯಿದೆ ರಕ್ಷಣೆ ಹಾಗೂ ಇತರೆ ಕೇಂದ್ರ, ರಾಜ್ಯ ಸರ್ಕಾರಗಳ ನೆರವು ಪಡೆಯಬಹುದು.
ಹೆಚ್ಚಿನ ವಿವರಗಳಿಗೆ ಮೊ.ಸಂ. 9986444654 ಅಥವಾ ವೆಬ್‍ಸೈಟ್ www.msmemysuru.com ಸಂಪರ್ಕಿಸಬಹುದೆಂದು ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.