ಮುಂಬೈ: ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಮದ್ರಾಸ್ ರಬ್ಬರ್ ಫ್ಯಾಕ್ಟರಿ(MRF) ಹೊಸ ದಾಖಲೆ ಬರೆದಿದೆ. ಎಂ.ಆರ್.ಎಫ್. ಒಂದು ಷೇರಿನ ಬೆಲೆ 1 ಲಕ್ಷ ರೂ. ಆಗಿದೆ.
ಇಷ್ಟೊಂದು ದೊಡ್ಡ ಮೊತ್ತದಲ್ಲಿ ಷೇರಿನ ಬೆಲೆ ಹೆಚ್ಚಳವಾದ ಮೊದಲ ಭಾರತೀಯ ಕಂಪನಿ ಎನ್ನುವ ಹೆಗ್ಗಳಿಕೆಗೆ ಎಂ.ಆರ್.ಎಫ್. ಪಾತ್ರವಾಗಿದೆ. ಈ ಮೂಲಕ ದಲಾಲ್ ಸ್ಟ್ರೀಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಷೇರುಪೇಟೆಯಲ್ಲಿ ಎಂ.ಆರ್.ಎಫ್. ಷೇರು ದರ ಒಂದು ಲಕ್ಷ ರೂ.ಗೆ ಹೆಚ್ಚಳವಾಗಿದ್ದು ಭಾರತದಲ್ಲಿ ಅತ್ಯಂತ ದುಬಾರಿ ಷೇರು ಇದಾಗಿದೆ. ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡ ಎಂ.ಆರ್.ಎಫ್. ಷೇರಿನ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ.
MRF ಕಂಪನಿಯ ಷೇರುಗಳು BSE ನಲ್ಲಿ ಸಾರ್ವಕಾಲಿಕ ಗರಿಷ್ಠ 1,00,300 ರೂ.ಗಳನ್ನು ಅಳೆಯಲು ನಿರ್ಣಾಯಕ 1 ಲಕ್ಷ ರೂ. ಮಾರ್ಕ್ ದಾಟಿವೆ. ಅಂತಿಮವಾಗಿ ಶೇ.1 ರಷ್ಟು ಏರಿಕೆಯಾಗಿ 99,950.65 ರೂ.ನಲ್ಲಿ ಕೊನೆಗೊಂಡಿತು.