ವ್ಯಾಪಾರ ಶುರು ಮಾಡುವ ಆಸಕ್ತಿ, ಜಾಗ ಹಾಗೂ ಹಣವಿದ್ದರೆ ಇಲ್ಲೊಂದು ಸುವರ್ಣಾವಕಾಶವಿದೆ. ಮದರ್ ಡೈರಿ ಜೊತೆ ಕೈಜೋಡಿಸಿ ನೀವು ವ್ಯವಹಾರ ಶುರು ಮಾಡಬಹುದು. ಮದರ್ ಡೈರಿ ಫ್ರೂಟ್ ಮತ್ತು ವೆಜಿಟೆಬಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಫ್ರ್ಯಾಂಚೈಸಿ ತೆಗೆದುಕೊಳ್ಳಲು ಅವಕಾಶ ನೀಡುತ್ತಿದೆ.
ಡೈರಿ ಉತ್ಪನ್ನಗಳ ಜೊತೆಗೆ ಮದರ್ ಡೈರಿ ಕಂಪನಿಯು ಹಣ್ಣು, ತರಕಾರಿ ಮಾರಾಟ ಮಾಡುತ್ತದೆ. ಇದಲ್ಲದೆ, ಖಾದ್ಯ ತೈಲಗಳು, ಆಹಾರ ಪದಾರ್ಥಗಳು, ಉಪ್ಪಿನಕಾಯಿ, ಹಣ್ಣಿನ ರಸ, ಜಾಮ್ ಮುಂತಾದ ವಸ್ತುಗಳನ್ನು ಸಹ ತಯಾರಿಸಿ ಮಾರಾಟ ಮಾಡುತ್ತದೆ.
ಕಂಪನಿಯು ದೇಶಾದ್ಯಂತ 2500 ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ. ಈಗ ಮದರ್ ಡೈರಿ ಇಡೀ ದೇಶದಾದ್ಯಂತ ತನ್ನ ಮಳಿಗೆ ಶುರು ಮಾಡುವ ಪ್ಲಾನ್ ನಲ್ಲಿದೆ. ಇದಕ್ಕಾಗಿ ಅದು ಫ್ರಾಂಚೈಸಿಗಳನ್ನು ನೀಡುತ್ತಿದೆ. ಮದರ್ ಡೈರಿ ಫ್ರ್ಯಾಂಚೈಸಿ ತೆಗೆದುಕೊಳ್ಳಲು ಬಯಸಿದರೆ, ಸಾಕಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಸ್ಥಳ ಮತ್ತು ಸ್ಥಳಕ್ಕೆ ಅನುಗುಣವಾಗಿ ಈ ಹೂಡಿಕೆ ಹೆಚ್ಚು ಅಥವಾ ಕಡಿಮೆ ಆಗಬಹುದು. ಈಗಾಗಲೇ ಜಾಗ ಹೊಂದಿದ್ದರೆ ಹಣ ಉಳಿಯಲಿದೆ. 5 ರಿಂದ 10 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. 50,000 ರೂಪಾಯಿಗಳನ್ನು ಪ್ರತ್ಯೇಕವಾಗಿ ಬ್ರಾಂಡ್ ಶುಲ್ಕವಾಗಿ ನೀಡಬೇಕಾಗುತ್ತದೆ. ಕಂಪನಿಯು ಯಾವುದೇ ರಾಯಲ್ಟಿ ಶುಲ್ಕವನ್ನು ವಿಧಿಸುವುದಿಲ್ಲ.
ಮೊದಲ ವರ್ಷದಲ್ಲಿ ಹೂಡಿಕೆಯ ಮೇಲೆ ಶೇಕಡಾ 30ರಷ್ಟು ಲಾಭವನ್ನು ನಿರೀಕ್ಷಿಸಬಹುದು. ಪ್ರತಿ ತಿಂಗಳು ಸುಮಾರು 44,000 ರೂಪಾಯಿ ಗಳಿಸಬಹುದು. ಇದು ಡೈರಿ ತೆಗೆಯುವ ಸ್ಥಳವನ್ನು ಅವಲಂಭಿಸಿದೆ.