ಮದರ್ ಡೈರಿ ಇಂದಿನಿಂದ ಹಾಲಿನ ದರವನ್ನು ಲೀಟರ್ ಗೆ ರೂ 2 ಹೆಚ್ಚಿಸಿದೆ. ಹೆಚ್ಚಿನ ಇನ್‌ಪುಟ್ ವೆಚ್ಚಗಳ ಕಾರಣ ದೆಹಲಿ-ಎನ್‌ಸಿಆರ್ ಮಾರುಕಟ್ಟೆಯಲ್ಲಿ ಮಂಗಳವಾರದಿಂದಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ ಎಂದು ಮದರ್ ಡೈರಿ ಸೋಮವಾರ ತಿಳಿಸಿದೆ.
ಫುಲ್‌ಕ್ರೀಮ್ ಹಾಲಿನ ದರವನ್ನು ಲೀಟರ್‌ಗೆ 2 ರೂ.ನಿಂದ 66 ರೂ.ಗೆ ಹೆಚ್ಚಿಸಲಾಗಿದ್ದು, ಟೋನ್ಡ್ ಹಾಲಿನ ದರವನ್ನು ಲೀಟರ್‌ಗೆ 51 ರೂ.ನಿಂದ 53 ರೂ.ಗೆ ಪರಿಷ್ಕರಿಸಲಾಗಿದೆ. ಆದಾಗ್ಯೂ, ಹಸುವಿನ ಹಾಲು ಮತ್ತು ಟೋಕನ್ ಮಿಲ್ಕ್ MRP ಯಲ್ಲಿ ಯಾವುದೇ ಪರಿಷ್ಕರಣೆ ಇಲ್ಲ ಎಂದು ಮದರ್ ಡೈರಿ ತಿಳಿಸಿದೆ.
ಹೈನುಗಾರಿಕೆ ಉದ್ಯಮಕ್ಕೆ ಇದು ಅಭೂತಪೂರ್ವ ವರ್ಷವಾಗಿದೆ. ಹಬ್ಬಗಳ ನಂತರವೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆಯಲ್ಲಿ ಗಮನಾರ್ಹ ಹೆಚ್ಚಳ ನೋಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.