
ಈ ಹೊಸ ನಿಯಮವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಎನ್ಎಸ್ಸಿ, ಸುಕನ್ಯಾ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ್ ಪತ್ರಕ್ಕೆ ಅನ್ವಯಿಸಲಿದೆ.
ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು 2021-22ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 50-110 ಬೇಸಿಸ್ ಪಾಯಿಂಟ್ಗೆ ಕಡಿತಗೊಂಡಿದೆ.
ಪಿಪಿಎಫ್ – 7.1 ಪ್ರತಿಶತ ಬಡ್ಡಿದರದಿಂದ 6.4 ಪ್ರತಿಶತ ಬಡ್ಡಿದರಕ್ಕೆ ಇಳಿಕೆ, ಎನ್ಎಸ್ಸಿ – 6.8 ಪ್ರತಿಶತದಿಂದ 5.9 ಪ್ರತಿಶತಕ್ಕೆ ಇಳಿಕೆ, ಸುಕನ್ಯಾ ಸಮೃದ್ಧಿ ಯೋಜನೆ – 7.6 ಪ್ರತಿಶತದಿಂದ 6.9 ಪ್ರತಿಶತಕ್ಕೆ ಇಳಿಕೆ, ಪೋಸ್ಟ್ ಆಫೀಸ್ ಠೇವಣಿ ದರವನ್ನ 0.40 ಪ್ರತಿಶತದಿಂದ 1.1 ಪ್ರತಿಶತಕ್ಕೆ ತರಲಾಗಿದೆ.
ಪರಿಷ್ಕರಣೆಗೊಂಡ ಬಡ್ಡಿ ದರದ ವಿವರ ಇಲ್ಲಿದೆ:
ಒಂದು ವರ್ಷದ ಠೇವಣಿ ಶೇ.5.5 ರಿಂದ 4.4
2 ವರ್ಷದ ಠೇವಣಿ ಶೇ.5.5 ರಿಂದ ಶೇ.5
3 ವರ್ಷದ ಠೇವಣಿ ಶೇ.5.5 ರಿಂದ ಶೇ.5.1
5 ವರ್ಷದ ಠೇವಣಿ ಶೇ.6.7 ರಿಂದ ಶೇ. 5.8
5 ವರ್ಷದ ಆರ್.ಡಿ. ಶೇ. 5.8 ರಿಂದ ಶೇ. 5.3
ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ. 7.4 ರಿಂದ ಶೇ. 6.5
ಮಾಸಿಕ ಆದಾಯ ಖಾತೆ ಶೇ. 6.6 ರಿಂದ ಶೇ. 5.7
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಶೇ. 6.8 ರಿಂದ ಶೇ. 5.9
ಪಿಪಿಎಫ್ ಯೋಜನೆ ಶೇ. 7.1 ರಿಂದ ಶೇ. 6.4
ಕಿಸಾನ್ ವಿಕಾಸ ಪತ್ರ ಶೇ. 6.9 ರಿಂದ ಶೇ. 6.2 ರಷ್ಟುಇಳಿಕೆಯಾಗಿದೆ 124 ತಿಂಗಳ ಬದಲಿಗೆ 138 ತಿಂಗಳಿಗೆ ಹೆಚ್ಚಳ ಮಾಡಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಶೇ. 7.6 ರಿಂದ ಶೇ. 6.9 ರಷ್ಟು ಇಳಿಕೆ ಮಾಡಲಾಗಿದೆ ಎಂದು ಹಣಕಾಸು ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
