ನವದೆಹಲಿ: ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಕಡಿತ ಮಾಡಲಾಗಿದೆ. ಏಪ್ರಿಲ್ 1 ರಿಂದ ಜೂನ್ 30 ರ ವರೆಗಿನ ಅವಧಿಯಲ್ಲಿ ಪರಿಷ್ಕೃತ ದರಗಳು ಕೆಳಕಂಡಂತೆ ಇರುತ್ತದೆ.
ಉಳಿತಾಯ ಠೇವಣಿ ಬಡ್ಡಿದರ ಶೇಕಡ 4 ರಿಂದ 3.5 ರಷ್ಟು ಇಳಿಕೆಯಾಗಿದೆ.
ಒಂದು ವರ್ಷದ ಠೇವಣಿ ಶೇಕಡ 5.5 ರಿಂದ 4.4
2 ವರ್ಷದ ಠೇವಣಿ ಶೇಕಡ 5.5 ರಿಂದ ಶೇಕಡ 5
3 ವರ್ಷದ ಠೇವಣಿ ಶೇಕಡ 5.5 ರಿಂದ ಶೇಕಡ 5.1
5 ವರ್ಷದ ಠೇವಣಿ ಶೇಕಡ 6.7 ರಿಂದ ಶೇಕಡ 5.8
5 ವರ್ಷದ ಆರ್.ಡಿ. ಶೇಕಡ 5.8 ರಿಂದ ಶೇಕಡ 5.3
ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇಕಡ 7.4 ರಿಂದ ಶೇಕಡ 6.5
ಮಾಸಿಕ ಆದಾಯ ಖಾತೆ ಶೇಕಡ 6.6 ರಿಂದ ಶೇಕಡ 5.7
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಶೇಕಡ 6.8 ರಿಂದ ಶೇಕಡ 5.9
ಪಿಪಿಎಫ್ ಯೋಜನೆ ಶೇಕಡ 7.1 ರಿಂದ ಶೇಕಡ 6.4
ಕಿಸಾನ್ ವಿಕಾಸ ಪತ್ರ ಶೇಕಡ 6.9 ರಿಂದ ಶೇಕಡ 6.2 ರಷ್ಟುಇಳಿಕೆಯಾಗಿದೆ 124 ತಿಂಗಳ ಬದಲಿಗೆ 138 ತಿಂಗಳಿಗೆ ಹೆಚ್ಚಳ ಮಾಡಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಶೇಕಡ 7.6 ರಿಂದ ಶೇಕಡ 6.9 ರಷ್ಟು ಇಳಿಕೆ ಮಾಡಲಾಗಿದೆ ಎಂದು ಹಣಕಾಸು ಇಲಾಖೆಯಿಂದ ಮಾಹಿತಿ ನೀಡಲಾಗಿದೆ.