alex Certify ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್, ಖಾತೆಗೆ ಸರ್ಕಾರದಿಂದ ಹಣ ಜಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್, ಖಾತೆಗೆ ಸರ್ಕಾರದಿಂದ ಹಣ ಜಮಾ

ನವದೆಹಲಿ: ಭವಿಷ್ಯ ನಿಧಿ ಖಾತೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊರೊನಾದ ಸಂಕಷ್ಟ ನಡೆಯುತ್ತಿರುವ ಈ ಕಾಲದಲ್ಲಿ ಕೇಂದ್ರ ಸರ್ಕಾರ 31 ಮಾರ್ಚ್ 2022 ರವರೆಗೂ ಅವರ ಸಂಬಳದಿಂದ ಕಟ್​ ಆಗುವಂತಹ ಹಣವನ್ನ ಪಾವತಿಸಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಸೋಮವಾರ ಆತ್ಮನಿರ್ಭರ್​​ ಭಾರತ್​ ರೋಜಗಾರ್​ ಯೋಜನೆಯ ಅಡಿಯಲ್ಲಿ 30 ಜೂನ್​ 2021 ರವರೆಗೆ ನೀಡಲಾಗಿದ್ದ ಡೆಡ್​ಲೈನ್​ನ್ನು 31 ಮಾರ್ಚ್​ 2022ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಇಪಿಎಫ್​​ ಖಾತೆಯನ್ನ ಹೊಂದಿರುವ ಲಕ್ಷಾಂತರ ಸದಸ್ಯರಿಗೆ ನೆಮ್ಮದಿ ನೀಡುವ ಸಲುವಾಗಿ 2020 ರ ಅಕ್ಟೋಬರ್​ ತಿಂಗಳಲ್ಲಿ ಆತ್ಮನಿರ್ಭರ್​ ಭಾರತ್​ ರೋಜಗಾರ್​ ಯೋಜನೆಯ ಅಡಿಯಲ್ಲಿ ನೌಕರರ ಸಂಬಳದಿಂದ ಕಡಿತವಾಗಿ ಪಿಎಫ್​ ಖಾತೆಗೆ ಜಮೆ ಆಗುತ್ತಿದ್ದ ಹಣವನ್ನ ತಾನೇ ನೀಡಲು ನಿರ್ಧರಿಸಿತ್ತು.

ಕೇಂದ್ರ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ನೌಕರರ ಸಂಬಳದಲ್ಲಿ ಕಡಿತವಾಗುತ್ತಿದ್ದ 12 ಪ್ರತಿಶತ ಹಣವನ್ನೂ ಇನ್ಮೇಲೆ ಸರ್ಕಾರವೇ ನೋಡಿಕೊಳ್ಳಲಿದೆ. ಅಂದರೆ ಒಟ್ಟು 24 ಪ್ರತಿಶತ ಹಣವನ್ನ ಸರ್ಕಾರವೇ ಭರಿಸಲಿದೆ.

ಕೊರೊನಾದ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೀಡಿರುವ ಈ ಸೌಲಭ್ಯದಿಂದಾಗಿ 2 ವರ್ಷಗಳ ಕಾಲ ಪಿಎಫ್​ ಖಾತೆಯ ಜವಾಬ್ದಾರಿಯನ್ನ ಸರ್ಕಾರವೇ ನೋಡಿಕೊಳ್ಳಲಿದೆ.

ಇದನ್ನ ಹೊರತುಪಡಿಸಿ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಲಾಕ್​ಡೌನ್​ ಜಾರಿಯಾಗಿದ್ದ ವೇಳೆ ಕೆಲಸ ಕಳೆದುಕೊಂಡಿದ್ದ ನೌಕರರಿಗೆ ಮತ್ತೆ ಕೆಲಸ ಸಿಕ್ಕಲ್ಲಿ ಅವರೂ ಸಹ ಈ ಸೌಲಭ್ಯದ ಲಾಭವನ್ನ ಪಡೆಯಲಿದ್ದಾರೆ.

1 ಮಾರ್ಚ್ 2020 ರಿಂದ 2020 ಸೆಪ್ಟೆಂಬರ್​​ 30ರವರೆಗೆ ನೌಕರಿಯಲ್ಲಿದ್ದವರಿಗೆ ಸರ್ಕಾರದ ಈ ಯೋಜನೆಯ ಲಾಭ ಸಿಗಲಿದೆ.

ಇದರ ಜೊತೆಯಲ್ಲಿ ಸರ್ಕಾರದ ಈ ಯೋಜನೆಯಿಂದಾಗಿ 15 ಸಾವಿರ ರೂಪಾಯಿ ಮಾಸಿಕ ವೇತನವನ್ನ ಪಡೆಯುತ್ತಿದ್ದು, 2020ರ ಅಕ್ಟೋಬರ್​ ತಿಂಗಳ ಅವಧಿಗಿಂತ ಮುನ್ನ ಕೆಲಸ ಮಾಡುತ್ತಿದ್ದವರೂ ಈ ಯೋಜನೆಯ ಪಾಲುದಾರರಾಗಿದ್ದಾರೆ.

ಈ ಯೋಜನೆಯ ಲಾಭ ಪಡೆಯಲು ಇಪಿಎಫ್​ ವೆಬ್​ಸೈಟ್​ಗೆ ಲಾಗಿನ್​ ಆಗಬೇಕು

ಪೇಜ್​ ಓಪನ್​ ಆದ ಬಳಿಕ  ಸರ್ವೀಸಸ್​ ಆಯ್ಕೆ ಮೇಲೆ ಕ್ಲಿಕ್​ ಮಾಡಿ.

ಈಗ ನೀವು Employees  ಟ್ಯಾಬ್​ ಮೇಲೆ ಕ್ಲಿಕ್​ ಮಾಡಿ.

Employee Registration ಗಾಗಿ ನೀವು Register here ಲಿಂಕ್​ ಮೇಲೆ ಕ್ಲಿಕ್​ ಮಾಡಬೇಕು.

ಈಗ ನಿಮ್ಮ ಮುಂದೆ ರಿಜಿಸ್ಟ್ರೇಷನ್​​ ಫಾರ್ಮ್​ ತೆರೆದುಕೊಳ್ಳಲಿದೆ.

ರಿಜಿಸ್ಟ್ರೇಷನ್​ ಫಾರ್ಮ್ ನಲ್ಲಿ​ ಕೇಳಲಾದ ಎಲ್ಲಾ ಮಾಹಿತಿಗಳನ್ನ ಒದಗಿಸಿ.

ಇದಾದ ಬಳಿಕ ನೀವು ಸಬ್​ಮಿಟ್ ಆಯ್ಕೆ ಮೇಲೆ ಕ್ಲಿಕ್​ ಮಾಡಬೇಕು.

ಈಗ ನೀವು ಇಪಿಎಫ್​ನಲ್ಲಿ ನೋಂದಾಯಿಸಲ್ಪಟ್ಟಿದ್ದೀರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...