ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೌಲ್ಯದ ಕೃಷಿ ಇನ್ಫ್ರಾ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಪ್ರಧಾನಿ ಮೋದಿ ಘೋಷಿಸಿದ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಸಹ ನವೆಂಬರ್ ವರೆಗೆ ವಿಸ್ತರಿಸಲು ಅನುಮೋದನೆ ಸಿಕ್ಕಿದೆ.
ಕ್ಯಾಬಿನೆಟ್ ಸಭೆ ಮುಕ್ತಾಯಗೊಂಡಿದ್ದು, 3.30ರ ಸುಮಾರಿಗೆ ಅಧಿಕೃತ ಘೋಷಣೆಯಾಗಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಮೋದಿ ಸರ್ಕಾರ ನವೆಂಬರ್ ವೇಳೆಗೆ 80 ಕೋಟಿ ಜನರಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಇದನ್ನು ಘೋಷಿಸಿದ್ದರು.
ಉದ್ಯಮಿಗಳು ಮತ್ತು ಉದ್ಯೋಗಿಗಳಿಗೆ ಶೇಕಡಾ 24 ರಷ್ಟು ಇಪಿಎಫ್ ಬೆಂಬಲವನ್ನು ಕ್ಯಾಬಿನೆಟ್ ಅನುಮೋದಿಸಿದೆ. ಉಜ್ವಲಾ ಯೋಜನೆಯ ವಿಸ್ತರಣೆಗೆ ಕ್ಯಾಬಿನೆಟ್ ಅಸ್ತು ಎಂದಿದೆ. ಉಚಿತ ಸಿಲಿಂಡರ್ ಉಜ್ವಲಾ ಯೋಜನೆ ಫಲಾನಭವಿಗಳಿಗೆ ಉಚಿತವಾಗಿ ಸಿಗಲಿದೆ. ಈ ಯೋಜನೆಯಡಿ ಸಿಲಿಂಡರ್ ಖರೀದಿ ಮಾಡಲು 3,200 ರೂಪಾಯಿ ನೀಡಬೇಕು. 1,600 ರೂಪಾಯಿಗಳ ಸಬ್ಸಿಡಿಯನ್ನು ಸರ್ಕಾರ ನೇರವಾಗಿ ನೀಡುತ್ತದೆ. ತೈಲ ಕಂಪನಿಗಳು ಉಳಿದ ಮೊತ್ತ 1,600 ರೂಪಾಯಿಯನ್ನು ಪಾವತಿಸುತ್ತವೆ. ಗ್ರಾಹಕರು ಈ 1,600 ರೂಪಾಯಿಗಳನ್ನು ತೈಲ ಕಂಪನಿಗಳಿಗೆ ಇಎಂಐ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಈ ಇಎಂಐ ಪಾವತಿಯನ್ನು ಸದ್ಯ ಗ್ರಾಹಕರು ಪಾವತಿಸಬೇಕಾಗಿಲ್ಲ.