ನವದೆಹಲಿ: ಜನವರಿ 29ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ದೇಶದ ಆರ್ಥಿಕ-ಆರೋಗ್ಯ-ರಕ್ಷಣಾ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ವಿವಿಧ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರಲಿದೆ.
ಬಜೆಟ್ ಅಧಿವೇಶನದ ಬಳಿಕ ಪ್ರಮುಖವಾಗಿ ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಬಹುದೊಡ್ಡ ಬದಲಾವಣೆಯಾಗಲಿದ್ದು, ಹೊಸ ತೆರಿಗೆಗಳ ಜಾರಿ, ವಿವಿಧ ವಲಗಳಿಗೆ ಅನುದಾನ ಘೋಷಣೆ, ಹೆದ್ದಾರಿಗಳಲ್ಲಿ ಕಡ್ಡಾಯ ಫಾಸ್ಟ್ಯಾಗ್ ನಿಯಮ ಜಾರಿ, ಎಟಿಎಂ ನಗದು ವಿತ್ ಡ್ರಾವಲ್ ನಿಯಮದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ನಿರೀಕ್ಷಿಸಲಾಗಿದೆ.
ಬರೋಬ್ಬರಿ 16.95 ಲಕ್ಷ ರೂ. ಮೌಲ್ಯದ ರೇಸ್ ಬೈಕ್ ಬಿಡುಗಡೆ…!
ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ, ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದ್ದು, ಇದು ಇನ್ನೂ ಮುಂದುವರೆಯಲಿದೆ. ಪ್ರಮುಖವಾಗಿ ದೇಶದ ಎಲ್ಲಾ ವಾಹನಗಳಲ್ಲಿಯೂ ಫಾಸ್ಟ್ಯಾಗ್ ಅಳವಡಿಕೆ ಫೆ.15ರಿಂದ ಕಡ್ಡಾಯವಾಗಲಿದೆ. ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ ಒ), ಇಪಿಎಸ್ 1995 ಅಡಿ ಪಿಂಚಣಿ ಡ್ರಾ ಮಾಡಿಕೊಳ್ಳುವ ಪಿಂಚಣಿದಾರರ ಸಮಯದ ಮಿತಿಯನ್ನು ಫೆ.28ರವರೆಗೆ ವಿಸ್ತರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಫೆ.1ರಿಂದ ಹೊಸ ನಿಯಮವನ್ನು ಪಾಲಿಸಬೇಕು. ಇಎಂವಿಯೇತರ ಎಟಿಎಂ ಯಂತ್ರಗಳಿಂದ ವ್ಯವಹಾರ ಮಾಡುವುದರ ಮೇಲೆ ನಿಬಂಧನೆಗಳನ್ನು ವಿಧಿಸುವುದಾಗಿ ಪಿಎನ್ ಬಿ ಘೋಷಿಸಿದೆ. ಇಎಂವಿ ಎಟಿಎಂಗಳಲ್ಲಿ ವ್ಯವಹಾರ ಸಮಯದಲ್ಲಿ ಕಾರ್ಡ್ ನ್ನು ಹಿಡಿದಿಟ್ಟುಕೊಂಡು ಚಿಪ್ ನಲ್ಲಿ ದತ್ತಾಂಶಗಳನ್ನು ಓದಲಿದೆ.
ಇನ್ನು ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ದರ ಪರಿಷ್ಕರಿಸಲಾಗುತ್ತಿದ್ದು, ಎಲ್ ಪಿ ಜಿ ಬೆಲೆಯಲ್ಲಿ ಕೂಡ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆಯಾಗಿ ಫೆಬ್ರವರಿ ತಿಂಗಳಿಂದ ಜನಸಾಮಾನ್ಯರ ಬದುಕಿನಲ್ಲಿ ಹಲವು ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ.