ನವದೆಹಲಿ: ಮೊಬೈಲ್ ಉತ್ಪಾದನೆ, ತಯಾರಿಸುವುದರಲ್ಲಿ ವಿಶ್ವದಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.
2014ರಲ್ಲಿ ಭಾರತದಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನೆ ಕಾರ್ಖಾನೆಗಳಿದ್ದು, ಇದೀಗ ದೇಶದಲ್ಲಿ 260 ಮೊಬೈಲ್ ತಯಾರಿಸುವ ಕಾರ್ಖಾನೆಗಳಿವೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಂಪನಿಗಳು ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗಳ ಮೊಬೈಲ್ ಮತ್ತು ಕಾಂಪೋನೆಂಟ್ಸ್ ಗಳನ್ನು ತಯಾರಿಸಲು ಬದ್ಧವಾಗಿದ್ದು, 3 ಲಕ್ಷ ನೇರ ಉದ್ಯೋಗ ಮತ್ತು 6 ಲಕ್ಷ ಪರೋಕ್ಷ ಉದ್ಯೋಗಗಳನ್ನು ಒದಗಿಸುತ್ತವೆ ಎಂದು ಹೇಳಿದ್ದಾರೆ.