ಬಜೆಟ್ ನಂತ್ರ ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಬಿದ್ದಿದೆ. ಟೆಲಿಕಾಂ ಕಂಪನಿಗಳು ತಮ್ಮ ಸುಂಕ ಯೋಜನೆಗಳ ಬೆಲೆ ಹೆಚ್ಚಿಸಿವೆ. ಸದ್ಯ ವಿ ತನ್ನ ಕೆಲ ಪೋಸ್ಟ್ ಪೇಯ್ಡ್ ಯೋಜನೆಯನ್ನು ದುಬಾರಿಗೊಳಿಸಿದೆ.
ವಿಯ ಫ್ಯಾಮಿಲಿ ಪೋಸ್ಟ್ ಪೇಯ್ಡ್ ಪ್ಲಾನ್ ದುಬಾರಿಯಾಗಿದೆ. ಮಾಧ್ಯಮಗಳ ವರದಿ ಪ್ರಕಾರ, 598 ರೂಪಾಯಿ ಹಾಗೂ 699 ರೂಪಾಯಿಯಿದ್ದ ಈ ಯೋಜನೆ ಬೆಲೆ ಈಗ ಹೆಚ್ಚಾಗಿದೆ. ಕ್ರಮವಾಗಿ ಫ್ಯಾಮಿಲಿ ಪೋಸ್ಟ್ ಪೇಯ್ಡ್ ಪ್ಲಾನ್ ಬೆಲೆ 649 ಮತ್ತು 799 ರೂಪಾಯಿಯಾಗಿದೆ. ವಿ ಐದು ವಲಯಗಳಲ್ಲಿ ಹೊಸ ಬೆಲೆಯನ್ನು ಈಗಾಗಲೇ ಜಾರಿಗೊಳಿಸಿದೆ. ಚೆನ್ನೈ, ತಮಿಳುನಾಡು, ಕೋಲ್ಕತಾ, ಮಹಾರಾಷ್ಟ್ರ ಮತ್ತು ಗೋವಾ ವಲಯಗಳಲ್ಲಿ ಹೊಸ ದರಗಳು ಜಾರಿಗೆ ಬಂದಿವೆ.
ಇದನ್ನು ಹೊರತುಪಡಿಸಿ ಬೇರೆ ವಲಯಗಳಲ್ಲಿ ಬೆಲೆ ಏರಿಕೆಯಾಗಿಲ್ಲ. ಪೋಸ್ಟ್ ಪೇಯ್ಡ್ ಯೋಜನೆ ಬೆಲೆ 598, 749, 899 ಮತ್ತು 999 ರೂಪಾಯಿಯಿದೆ. ಇದ್ರಲ್ಲಿ ಬಳಕೆದಾರರಿಗೆ 80 ಜಿಬಿ ಡೇಟಾ ಸಿಗಲಿದೆ. ಇದ್ರಲ್ಲಿ ಎರಡು ಸಂಪರ್ಕವನ್ನು ನೀಡಲಾಗುತ್ತದೆ. ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ 50 ಜಿಬಿ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರಿಗೆ 30 ಜಿಬಿ ಡೇಟಾ ನೀಡಲಾಗುತ್ತದೆ.