ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆ(ಎಂಎಸ್ಎಂಇ)ಗಳಿಗೆ ನೀಡಬೇಕಿರುವ ಬಾಕಿಯನ್ನು ಆದ್ಯತೆ ಮೇರೆಗೆ ಪಾವತಿಸುವಂತೆ ಕಾರ್ಪೊರೇಟ್ ಕಂಪನಿಗಳಿಗೆ ಎಂಎಸ್ಎಂಇ ಸಚಿವಾಲಯ ಸೂಚಿಸಿದೆ.
ಎಂಎಸ್ಎಂಇ ವಲಯವನ್ನು ಲಕ್ಷಗಟ್ಟಲೆ ಜನ ನಂಬಿಕೊಂಡಿದ್ದು ಬಾಕಿ ಪಾವತಿಸುವುದರಿಂದ ಅನುಕೂಲವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಎಂಎಸ್ಎಂಇ ವಲಯದ ಕಾರ್ಯಾಚರಣೆ ಮತ್ತು ಕೆಲಸಗಾರರ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಆದ್ಯತೆ ಮೇರೆಗೆ ನೀಡಬೇಕಿರುವ ಬಾಕಿ ಪಾವತಿ ಮಾಡಬೇಕೆಂದು ಹೇಳಲಾಗಿದೆ. ವಿವಿಧ ಸಚಿವಾಲಯಗಳು ಮತ್ತು ಕೇಂದ್ರ ಉದ್ಯಮಗಳ ವತಿಯಿಂದ ಎಂಎಸ್ಎಂಇ ವಲಯಕ್ಕೆ ಸುಮಾರು 10 ಸಾವಿರ ಕೋಟಿ ರೂಪಾಯಿ ಬಾಕಿ ಮೊತ್ತ ಪಾವತಿಸಬೇಕಿದೆ. ಈ ಹಿನ್ನಲೆಯಲ್ಲಿ ಸಚಿವಾಲಯ ಕಾರ್ಪೋರೇಟ್ ಕಂಪನಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.