ಅಪರೂಪದ ತಾಂಝಾನೈಟ್ ರತ್ನದ ಕಲ್ಲುಗಳನ್ನು ಪತ್ತೆ ಮಾಡಿದ ತಾಂಝಾನಿಯಾದ ಗಣಿ ಕೆಲಸಗಾರನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ತಾನು ಪತ್ತೆ ಮಾಡಿದ ಎರಡೇ ಎರಡು ಕಲ್ಲುಗಳಿಗೆ $3.35 ದಶಲಕ್ಷ ಡಾಲರ್ (25.33 ಕೋಟಿ ರೂ.ಗಳು) ಜೇಬಿಗಿಳಿಸಿದ್ದಾನೆ ಸನಿನಿಯು ಲಾಯ್ಝರ್.
ಮುಂಗೈನಷ್ಟು ದೊಡ್ಡದಿರುವ ಈ ರತ್ನಶಿಲೆಗಳು 9.27 ಕೆಜಿ ಹಾಗೂ 5.1 ಕೆಜಿಯಷ್ಟು ತೂಗುತ್ತವೆ. ಈ ಕಲ್ಲುಗಳನ್ನು ಬ್ಯಾಂಕ್ ಆಫ್ ತಾಂಝಾನಿಯಾ ಖರೀದಿ ಮಾಡಿದ್ದು, ಖುದ್ದು ಅಲ್ಲಿನ ಅಧ್ಯಕ್ಷ ಜಾನ್ ಮಾಗುಫುಲಿ ಸನಿನಿಗೆ ಕರೆ ಮಾಡಿ ದೂರವಾಣಿಯ ನೇರ ಪ್ರಸಾರ ಕಾರ್ಯಕ್ರಮವೊಂದರಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ರತ್ನದ ಕಲ್ಲುಗಳು ಹಾಗೂ ಚಿನ್ನವನ್ನು ನೇರವಾಗಿ ಮಾರಾಟ ಮಾಡಲು ಕಳೆದ ವರ್ಷ ತಾಂಝಾನಿಯಾ ಸರ್ಕಾರ ದೇಶಾದ್ಯಂತ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದೆ.