ಬೆಂಗಳೂರು: ಪಶು ಆಹಾರ ಮಾರಾಟ ರಿಯಾಯಿತಿ ಮುಂದುವರಿಕೆ ಮಾಡಲಾಗಿದೆ. ನಂದಿನಿ ಬ್ರಾಂಡ್ ನ ಪಶು ಆಹಾರ ಮಾರಾಟ ಬೆಲೆಯನ್ನು ಕೆಎಂಎಫ್ 500 ರೂಪಾಯಿ ಕಡಿಮೆ ಮಾಡಿದ್ದು ಈ ಸೌಲಭ್ಯವನ್ನು ಜನವರಿ 5 ರ ವರೆಗೆ ವಿಸ್ತರಿಸಲಾಗಿದೆ.
ಕೋವಿಡ್ ಕಾರಣ ಮತ್ತು ಅತಿವೃಷ್ಟಿಯಿಂದಾಗಿ ಹೈನುಗಾರರಿಗೆ ನಷ್ಟ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ 1 ರಿಂದ ನಂದಿನಿ ಪಶು ಆಹಾರದ ಮಾರಾಟ ಬೆಲೆಯಲ್ಲಿ ಪ್ರತಿ ಟನ್ ಗೆ 500 ರೂಪಾಯಿ ರಿಯಾಯಿತಿ ನೀಡಲಾಗಿದೆ. ಹೈನುಗಾರರಿಗೆ ಅನುಕೂಲವಾಗುವಂತೆ ಜನವರಿ 5 ರವರೆಗೆ ರಿಯಾಯಿತಿ ಸೌಲಭ್ಯ ಮುಂದುವರೆಸಲಾಗುವುದು ಎಂದು ಹೇಳಲಾಗಿದೆ.