ಶಿವಮೊಗ್ಗ: ಕೊರೊನಾ ಕಾರಣದಿಂದಾಗಿ ಹಾಲಿನ ಬೇಡಿಕೆ ಕುಸಿದು ಉತ್ಪಾದನೆ ಹೆಚ್ಚಳ ಆಗಿರುವುದರಿಂದ ಹಾಲು ಖರೀದಿ ದರವನ್ನು ಇಳಿಕೆ ಮಾಡಲಾಗಿದೆ.
ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹಾಸನ, ಮೈಸೂರು, ಧಾರವಾಡ, ತುಮಕೂರು ಸೇರಿದಂತೆ ಹಲವು ಹಾಲು ಉತ್ಪಾದಕರ ಒಕ್ಕೂಟಗಳು ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡಿವೆ.
ಅದೇ ರೀತಿ, ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ(ಶಿಮುಲ್) ಕೂಡ ಹಾಲಿನ ಖರೀದಿ ದರವನ್ನು ಒಂದು ರೂಪಾಯಿಯಷ್ಟು ಇಳಿಕೆ ಮಾಡಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರ 1 ರೂಪಾಯಿ ಕಡಿಮೆ ಮಾಡಲಾಗಿದೆ. 29.50 ರೂ.ನಿಂದ 28.50 ರೂಪಾಯಿಗೆ ಇಳಿಸಲಾಗಿದೆ ಎಂದು ಹೇಳಲಾಗಿದೆ.