ಬೆಂಗಳೂರು: ಪ್ರಸಕ್ತ ಸಾಲಿಗೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. 2020 -21 ನೇ ಸಾಲಿನ ಪ್ರೋತ್ಸಾಹಧನದಡಿ 1250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಜುಲೈ 4 ರಂದು 535 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟಾರೆ 1250 ಕೋಟಿ ರೂ. ಬಿಡುಗಡೆಯಾಗಿದೆ 2020 ರ ಮಾರ್ಚ್ ನಿಂದ ಜೂನ್ ವರೆಗಿನ ಪ್ರೋತ್ಸಾಹಧನವನ್ನು ಡಿಬಿಟಿ ಮೂಲಕ ಹಾಲು ಪೂರೈಕೆದಾರರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಫೆಬ್ರುವರಿವರೆಗೂ ಹಾಲು ಪೂರೈಕೆದಾರರಿಗೆ ಪ್ರೋತ್ಸಾಹಧನ ನೀಡಲಾಗಿದ್ದು, ಮಾರ್ಚ್ ನಿಂದ ಜೂನ್ ವರೆಗೆ ಪ್ರೋತ್ಸಾಹ ಧನ ಡಿ.ಬಿ.ಟಿ ಮೂಲಕ ರೈತರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ.