ನೊಯಿಡಾ: ಪ್ರಸಿದ್ಧ ಸಾಫ್ಟ್ ವೇರ್ ಕಂಪನಿ ಮೈಕ್ರೊಸಾಫ್ಟ್ ಈಗ ನೊಯಿಡಾದಲ್ಲಿ ನ್ಯೂ ಇಂಡಿಯಾ ಡೆವಲಪ್ಮೆಂಟ್ ಸೆಂಟರ್ (ಐಡಿಸಿ) ನಿರ್ಮಾಣ ಮಾಡಿದೆ. ಅದು ತಾಜ್ ಮಹಲ್ ಮಾದರಿಯ ಒಳಾಂಗಣ ವಿನ್ಯಾಸವನ್ನು ಹೊಂದಿದೆ ಎಂದು ಮೈಕ್ರೊಸಾಫ್ಟ್ ತಿಳಿಸಿದೆ.
ಈ ಹೊಸ ವ್ಯವಸ್ಥೆ ಇಂಜಿನಿಯರಿಂಗ್ ಆವಿಷ್ಕಾರಕ್ಕೆ ಸಾಕ್ಷಿಯಾಗಲಿದೆ. ಬೆಂಗಳೂರು, ಹೈದ್ರಾಬಾದ್ ಬಿಟ್ಟರೆ ಕಂಪನಿಯ ಮೂರನೇ ಶಕ್ತಿ ಕೇಂದ್ರ ಅಭಿವೃದ್ಧಿ ಕೇಂದ್ರವಾಗಲಿದೆ ಎಂದು ಮೈಕ್ರೊಸಾಫ್ಟ್ ತಿಳಿಸಿದೆ.
ಡೆಸ್ಕ್ ಟಾಪ್ ವಾಟ್ಸಾಪ್ ಬಳಕೆದಾರರಿಗೆ ಶುಭ ಸುದ್ದಿ
ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಹೊಂದಿರಬೇಕು. ಹೀಗಾಗಿ ಇದು ಹೊಸ ಇಂಜಿನಿಯರಿಂಗ್ ಹಬ್ ಆಗಲಿದೆ ಎಂದು ಮೈಕ್ರೊಸಾಫ್ಟ್ ಕಂಪನಿಯ ಏಷ್ಯಾದ ರಿಯಲ್ ಎಸ್ಟೇಟ್ ಆಪರೇಶನ್ ವಿಭಾಗದ ರೀಜನಲ್ ಡೈರೆಕ್ಟರ್ ರಿಕು ಪೆಂಟಿಕೈನ್ ತಿಳಿಸಿದ್ದಾರೆ. ಹೊಸ ಕಚೇರಿಯಲ್ಲಿ ವಿಶಾಲ ಪ್ರದೇಶ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವ್ಯವಸ್ಥೆ ಇದೆ ಎಂದು ಕಂಪನಿ ತಿಳಿಸಿದೆ.