ವಿಶ್ವದ ಪ್ರಸಿದ್ಧ ಟೆಕ್ ಕಂಪನಿ ಮೈಕ್ರೋಸಾಫ್ಟ್ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದೆ. ಜನಪ್ರಿಯ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಮುಚ್ಚಲು ಕಂಪನಿ ನಿರ್ಧರಿಸಿದೆ.
ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ 25 ವರ್ಷಗಳಿಂದ ಸೇವೆ ಸಲ್ಲಿಸಿದೆ. ಇಂಟರ್ನೆಟ್ ಎಕ್ಸ್ ಪ್ಲೋರರ್ ಮುಂದಿನ ವರ್ಷ ಜೂನ್ 20 ರಂದು ನಿವೃತ್ತಿ ಹೊಂದಲಿದೆ ಎಂದು ಮೈಕ್ರೋಸಾಫ್ಟ್ ಅಧಿಕೃತವಾಗಿ ಹೇಳಿದೆ.
ಮೈಕ್ರೋಸಾಫ್ಟ್ ಎಡ್ಜ್ ಈ ಜವಾಬ್ದಾರಿಯನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಕಂಪನಿ ಬುಧವಾರ ಹೇಳಿದೆ. ಇಂಟರ್ನೆಟ್ ಎಕ್ಸ್ ಪ್ಲೋರರ್ ಇದುವರೆಗೆ ವ್ಯಾಪಕವಾಗಿ ಬಳಸಲಾಗುವ ವೆಬ್ ಬ್ರೌಸರ್ ಆಗಿದ್ದು, 2003 ರ ಹೊತ್ತಿಗೆ ಶೇಕಡಾ 95ರಷ್ಟು ಬಳಕೆದಾರರನ್ನು ಹೊಂದಿತ್ತು.
ಇಂಟರ್ನೆಟ್ ಎಕ್ಸ್‌ಪ್ಲೋರರ್ ಮುಂದಿನ ವರ್ಷದವರೆಗೆ ಕಾರ್ಯನಿರ್ವಹಿಸುತ್ತದೆ. ಅದು ಸಂಪೂರ್ಣವಾಗಿ ಹೊಸ ಮೈಕ್ರೋಸಾಫ್ಟ್ ಎಡ್ಜ್ ಗೆ ಬದಲಾಗಲಿದೆ. ಇಂಟರ್ನೆಟ್ ಎಕ್ಸ್ ಪ್ಲೋರರ್‌ನಿಂದ ಮೈಕ್ರೋಸಾಫ್ಟ್ ಎಡ್ಜ್ ಗೆ ಸುಲಭವಾಗಿ ಬದಲಾಯಿಸಲು ಮೈಕ್ರೋಸಾಫ್ಟ್ ಕೆಲವು ತಿಂಗಳ ಹಿಂದೆ ಐಇ ಮೋಡ್ ವಿನ್ಯಾಸಗೊಳಿಸಿದೆ.