
ಕಡಿಮೆ ಬೆಲೆಗೆ ಮೊಬೈಲ್, ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ಖರೀದಿಸಲು ಬಯಸಿದರೆ ಒಳ್ಳೆ ಅವಕಾಶವಿದೆ. ಚೀನಾದ ಕಂಪನಿ ಶಿಯೋಮಿ ಈ ವಾರ `ಮಿ ಫ್ಯಾನ್ ಫೆಸ್ಟಿವಲ್ 2021’ ಮಾರಾಟ ಶುರು ಮಾಡಿದೆ. ಕೇವಲ ಒಂದು ರೂಪಾಯಿಗೆ ದುಬಾರಿ ಉತ್ಪನ್ನಗಳನ್ನು ಮನೆಗೆ ತರಬಹುದು. ಇದಕ್ಕಾಗಿ ಕಂಪನಿ ಮೈಕ್ರೋ ಪೇಜ್ ಸಿದ್ಧಪಡಿಸಿದೆ.
ಶಿಯೋಮಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಮಿ ಫ್ಯಾನ್ ಫೆಸ್ಟಿವಲ್ 2021 ಮಾರಾಟ ಏಪ್ರಿಲ್ 8 ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 13ರವರೆಗೆ ಮಾರಾಟ ನಡೆಯಲಿದೆ. ಕಂಪನಿಯ ಎಲ್ಲಾ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ಸಿಗ್ತಿದೆ. ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ ಹೋಮ್ ಉತ್ಪನ್ನಗಳಿಗೆ ರಿಯಾಯಿತಿ ಘೋಷಣೆ ಮಾಡಿದೆ.
ಪ್ರತಿದಿನ ಸಂಜೆ 4 ಗಂಟೆಗೆ 1 ರೂಪಾಯಿ ಫ್ಲ್ಯಾಷ್ ಮಾರಾಟ ನಡೆಯಲಿದೆ. ಇದರಲ್ಲಿ ಗ್ರಾಹಕರು 1 ರೂಪಾಯಿಗೆ ವಿಶೇಷ ಕೊಡುಗೆ ಸಿಗಲಿದೆ. ರಾತ್ರಿ 8 ಗಂಟೆಯಿಂದ 12 ಗಂಟೆಯವರೆಗೆ ಪಿಕ್ & ಚೋಸ್ ನಲ್ಲಿ ಗ್ರಾಹಕರು ಹೆಚ್ಚುವರಿ ರಿಯಾಯಿತಿ ಪಡೆಯಲಿದ್ದಾರೆ. ಮಿ ನೋಟ್‌ಬುಕ್ 14 ಮತ್ತು ಮಿ ನೋಟ್‌ಬುಕ್ 14, ರೆಡ್‌ಮಿ 20000 ಎಂಎಹೆಚ್ ಪವರ್ ಬ್ಯಾಂಕ್ ಸೇರಿದಂತೆ ಅನೇಕ ಉತ್ಪನ್ನಗಳು ಕಡಿಮೆ ಬೆಲೆಗೆ ಸಿಗಲಿವೆ.