ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಎಲ್ಲರ ತಲೆ ನೋವಿಗೆ ಕಾರಣವಾಗಿದೆ. ಇಂಧನ ಬೆಲೆ ಏರಿಕೆಯಿಂದ ಅನೇಕರು ಸ್ಕೂಟರ್, ಕಾರುಗಳನ್ನು ಗ್ಯಾರೇಜ್ ನಲ್ಲಿ ನಿಲ್ಲಿಸುವಂತಾಗಿದೆ.
ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಟ ಶುರು ಮಾಡಿದ್ದಾರೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರ್ತಿವೆ. ಎಲೆಕ್ಟ್ರಿಕ್ ವಾಹನದ ಚಾರ್ಜ್ ಹಾಗೂ ಮೈಲೇಜ್ ಬಗ್ಗೆ ಅನೇಕ ಪ್ರಶ್ನೆಗಳು ಏಳುತ್ತವೆ.
ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ಇರುವ ಸ್ಕೂಟರ್ ಖರೀದಿ ಬಯಸಿದ್ದರೆ, ಹೀರೋ ಎಲೆಕ್ಟ್ರಿಕ್ ಎನ್ ವೈ ಎಕ್ಸ್ ಹೆಚ್ ಎಕ್ಸ್ ಸ್ಕೂಟರ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಹೀರೋ ಎಲೆಕ್ಟ್ರಿಕ್ ಎನ್ ವೈ ಎಕ್ಸ್ ಹೆಚ್ ಎಕ್ಸ್ ಒಂದು ಬಾರಿ ಚಾರ್ಜ್ ಮಾಡಿದರೆ 210 ಕಿ.ಮೀ ವರೆಗೆ ಪ್ರಯಾಣಿಸಬಹುದು.
ಹೀರೋದ ಎನ್ ವೈಎಕ್ಸ್ ಹೆಚ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹೀರೋ ಎಲೆಕ್ಟ್ರಿಕ್ ಎನ್ ವೈ ಎಕ್ಸ್ ಹೆಚ್ ಎಕ್ಸ್ ಒಂದು ವಾಣಿಜ್ಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಹೀರೋ ಎಲೆಕ್ಟ್ರಿಕ್ನ ಈ ಸ್ಕೂಟರ್, ಸ್ಮಾರ್ಟ್ಫೋನ್ ಸಂಪರ್ಕ, ಬ್ಲೂಟೂತ್ ಇಂಟರ್ಫೇಸ್ನಿಂದ ಟಾಪ್-ಆಫ್-ಲೈನ್ ರಿಮೋಟ್ ಕಣ್ಗಾವಲು ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
ಹೀರೋದ ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ ಐ, ಎಲ್ ಐ ಇ ಆರ್ ಮತ್ತು HS500 ER ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ 63,900 ರೂಪಾಯಿಯಿಂದ ಪ್ರಾರಂಭವಾಗುತ್ತದೆ. 79,900 ವರೆಗೆ ಇದ್ರ ಬೆಲೆಯಿದೆ.