ನವದೆಹಲಿ: ಫೇಸ್ಬುಕ್ ನಿಂದ ಮತ್ತೆ ವಿಶ್ವದಾದ್ಯಂತ 6,000 ನೌಕರಿ ಕಡಿತಗೊಳಿಸಲಾಗಿದೆ. ವೆಚ್ಚ ಕಡಿತದ ಉದ್ದೇಶದಿಂದ ಫೇಸ್ಬುಕ್ ಮಾತೃ ಸಂಸ್ಥೆಯಾಗಿರುವ ಮೆಟಾ ಕಂಪನಿ ಹೊಸದಾಗಿ ಉದ್ಯೋಗ ಕಡಿತ ಕೈಗೊಂಡಿದೆ.
ಇದರಿಂದಾಗಿ ವಿಶ್ವದಾದ್ಯಂತ 6000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕಂಪನಿಗೆ ಆದ ನಷ್ಟ ಸರಿದೂಗಿಸಲು ಈ ಕ್ರಮ ಕೈಗೊಂಡಿರುವುದು ಹೇಳಲಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಮೆಟಾ 11,000 ಉದ್ಯೋಗ ಗಡಿತ ಮಾಡಿದ್ದು, ಈ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ 10 ಸಾವಿರ ಮಂದಿ ವಜಾ ಮಾಡಲಾಗುವುದು ಎಂದು ಫೇಸ್ಬುಕ್ ಸ್ಥಾಪಕ ಮಾರ್ಚ್ ಕಾರ್ಡ್ ಮಾರ್ಚ್ ನಲ್ಲಿ ಹೇಳಿದ್ದರು. ಅಂತೆಯೇ ಏಪ್ರಿಲ್ ನಲ್ಲಿ 4000 ಮತ್ತು ಈಗ 6000 ಉದ್ಯೋಗ ಕಡಿತ ಮಾಡಲಾಗಿದೆ.